ಸದ್ಯ ಐಪಿಎಲ್ ಮೇಲೆ ಎಲ್ಲರ ಕಣ್ಣಿದೆ. ಐಪಿಎಲ್ ಪಂದ್ಯ ವೀಕ್ಷಣೆಗೆ ಪ್ರೇಕ್ಷಕರು ಹೆಚ್ಚಿನ ಡೇಟಾ ಬಳಸ್ತಿದ್ದಾರೆ. ಮೊಬೈಲ್ ರೀಚಾರ್ಜ್ ಮಾಡುವ ಗ್ರಾಹಕರಿಗೆ ಪೇಟಿಎಂ ಖುಷಿ ಸುದ್ದಿ ನೀಡಿದೆ. ಐಪಿಎಲ್ ಋತುವಿನಲ್ಲಿ ಆಕರ್ಷಕ ಕ್ಯಾಶ್‌ಬ್ಯಾಕ್ ಆಫರ್‌ಗಳು ಮತ್ತು ಇತರ ಆಫರ್ ಗಳನ್ನು ನೀಡ್ತಿದೆ. ಪ್ರತಿದಿನ, ಪೇಟಿಎಂ ಒಂದೊಂದು ಆಫರ್ ನೀಡ್ತಿದೆ. ಇಂದು ಮೊಬೈಲ್ ರೀಚಾರ್ಜ್ ಮಾಡುವ ಗ್ರಾಹಕರಿಗೆ ಶೇಕಡಾ 100ರಷ್ಟು ಕ್ಯಾಶ್ಬ್ಯಾಕ್ ನೀಡುವುದಾಗಿ ಘೋಷಣೆ ಮಾಡಿದೆ.
ಅಂದ್ರೆ ಪೇಟಿಎಂ ಮೂಲಕ ಮೊಬೈಲ್ ರೀಚಾರ್ಜ್ ಮಾಡಿದ್ರೆ 50 ರೂಪಾಯಿವರೆಗೆ ಕ್ಯಾಶ್ಬ್ಯಾಕ್ ಸಿಗಲಿದೆ. ಜಿಯೋ, ವಿಐ, ಏರ್ಟೆಲ್, ಬಿಎಸ್‌ಎನ್‌ಎಲ್ ಗ್ರಾಹಕರು, 10 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಗೆ ಈ ಕ್ಯಾಶ್ಬ್ಯಾಕ್ ಪಡೆಯಲಿದ್ದಾರೆ.
ಹೊಸ ಬಳಕೆದಾರರು, 11 ರೂಪಾಯಿ, 21 ರೂಪಾಯಿ ಮತ್ತು 51 ರೂಪಾಯಿಯ ಜಿಯೋ ಡಾಟಾ ಪ್ಯಾಕ್ ರೀಚಾರ್ಜ್ ಮಾಡಿದ್ರೆ, 1 ಜಿಬಿ ಡೇಟಾ ರೀಚಾರ್ಜ್ ಮೊತ್ತಕ್ಕೆ ಸಮನಾದ ಕ್ಯಾಶ್‌ಬ್ಯಾಕ್ ಪೇಟಿಎಂ ನೀಡ್ತಿದೆ. ಈ ಆಫರ್ ಐಪಿಎಲ್ ಪಂದ್ಯಗಳು ನಡೆಯುವವರೆಗೆ ಪ್ರತಿದಿನ ಸಂಜೆ 7.30 ರಿಂದ ರಾತ್ರಿ 11 ರವರೆಗೆ ಅನ್ವಯವಾಗಲಿದೆ. ಪ್ರತಿ ರೀಚಾರ್ಜ್‌ನಲ್ಲಿ ಬಳಕೆದಾರರು ಖಚಿತವಾದ ಕ್ಯಾಶ್‌ಬ್ಯಾಕ್ ಪಡೆಯಲಿದ್ದಾರೆ.