ದೇಶದ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಯುಪಿಐ ಡಿಜಿಟಲ್ ಪಾವತಿ ಆ್ಯಪ್ ಮತ್ತು ಡಿಜಿಟಲ್ ಬ್ಯಾಂಕ್ ಎಂಬ ಹೆಗ್ಗಳಿಕೆಯ ಪೇಟಿಎಂ ಕಂಪನಿಯು ಭಾರತದ ಷೇರು ಮಾರುಕಟ್ಟೆ ಪ್ರವೇಶಿಸಲು ‘ ಸೆಕ್ಯೂರಿಟೀಸ್ ಹಾಗೂ ಎಕ್ಸ್‌ಚೇಂಜ್ ಬೋರ್ಡ್ (ಸೆಬಿ) ‘ ಒಪ್ಪಿಗೆ ನೀಡಿದೆ.
ಅಂದರೆ, ಇನ್ಮುಂದೆ ಪೇಟಿಎಂ ಕಂಪನಿಯು ತನ್ನ ಷೇರುಗಳನ್ನು ಮಾರಾಟಕ್ಕೆ ಇರಿಸಲಿದೆ. ಹೂಡಿಕೆದಾರರು ಖರೀದಿ ಮಾಡುವ ಮೂಲಕ ಕಂಪನಿಯು ಹೆಚ್ಚು ಲಾಭ ಕಾಣಲು ಸಾಧ್ಯವಾಗಲಿದೆ. ಈ ಬಾರಿ ಸೆಬಿಯು ನೀಡಿರುವ ಅನುಮೋದನೆಯಂತೆ 16,600 ಕೋಟಿ ರೂ. ಮೊತ್ತದ ಸ್ಟಾಕ್‌ಗಳು (ಐಪಿಒ) ಮಾರಾಟಕ್ಕೆ ಇರಿಸಲಾಗುವುದು.
BIG NEWS: ಆನ್ ಲೈನ್ ಮೂಲಕ ʼಗೋಲ್ಡ್ ಬಾಂಡ್ʼ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಸಿಗಲಿದೆ ಡಿಸ್ಕೌಂಟ್
ಇಂಥ ಸಿಹಿಸುದ್ದಿ ಕೇಳಿದ ಪೇಟಿಎಂ ಕಂಪನಿ ಉದ್ಯೋಗಿಗಳು ಸಂತಸದಿಂದ ಕಚೇರಿಯಲ್ಲಿ ಜೈಕಾರ ಹಾಕಿದ್ದಾರೆ. ಆದರೆ ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಅವರು ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ…!
ಅಂದರೆ, ಸುತ್ತಲೂ ಸಿಬ್ಬಂದಿಯನ್ನು ನಿಲ್ಲಿಸಿಕೊಂಡು ಸಂತಸದಿಂದ ಬಾಲಿವುಡ್‌ನ ಹಳೆಯ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರ ’ ಅಪ್ನಿ ತೋ ಜೈಸಿ ತೈಸಿ’ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.
ʼಬ್ಯಾಂಕ್ ಲಾಕರ್ʼ ಹೊಂದಿರುವವರಿಗೆ ತಪ್ಪದೆ ತಿಳಿದಿರಲಿ ಬದಲಾಗಿರುವ ಈ ನಿಯಮ
ವಿಜಯ್ ಶೇಖರ್ ಅವರ ಡಾನ್ಸ್ ವಿಡಿಯೊವನ್ನು ಆರ್‌ಪಿಜಿ ಮುಖ್ಯಸ್ಥ ಹರ್ಷ ಗೊಯೆಂಕಾ ಅವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪೇಟಿಎಂ ಕಚೇರಿಯಲ್ಲಿನ ಸಂಭ್ರಮದ ಕ್ಷಣಗಳಿವು ಎಂದು ಪೋಸ್ಟ್‌ಗೆ ಅಡಿಬರಹ ಹಾಕಿದ್ದಾರೆ. ವಿಜಯ್ ಶೇಖರ್ ಅವರ ದೇಸೀ ಸ್ಟೈಲ್ ಡ್ಯಾನ್ಸ್ ಬಹಳ ವೈರಲ್ ಆಗಿದೆ. ದೀಪಾವಳಿ ಸಂಭ್ರಮದ ನಡುವೆಯೇ ಪೇಟಿಎಂಗೆ ಬೋನಸ್ ಖುಷಿಯನ್ನು ಐಪಿಒ ಅನುಮೋದನೆ ತಂದುಕೊಟ್ಟಿದೆ.
ದೇಶದ ಎಲ್ಲಾ ಮೀನುಗಾರರಿಗೆ ಗುಡ್ ನ್ಯೂಸ್: ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ
ಅಂದಹಾಗೆ, ಅಮೆರಿಕದ ವ್ಯಾಲ್ಯೂಯೇಷನ್ ಎಕ್ಸ್‌ಪರ್ಟ್ ಅಶ್ವಥ್ ದಾಮೋದರನ್ ಅವರ ಪ್ರಕಾರ ಪೇಟಿಎಂನ ಒಂದು ಷೇರಿನ ಬೆಲೆ ಅಂದಾಜು 2,950 ರೂ. ಇರಬಹುದಂತೆ. ಕಂಪನಿ ಕೂಡ ಸುಮಾರು 1.48-1.78 ಲಕ್ಷ ಕೋಟಿ ರೂ. ವ್ಯಾಲ್ಯೂಯೇಷನ್ ಗುರಿಯನ್ನು ಇಟ್ಟುಕೊಂಡಿದೆ. ಅಂದರೆ, ತನ್ನ ಷೇರುಗಳು ಇಷ್ಟು ಮೊತ್ತಕ್ಕೆ ಖರೀದಿಯಾಗುವ ನಿರೀಕ್ಷೆಯಲ್ಲಿದೆ.