ನವದೆಹಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್(PPB) ಗೆ ಫಾಸ್ಟ್ಯಾಗ್ ನಲ್ಲಿ ಅವಕಾಶ ತೆಗೆದು ಹಾಕಲಾಗಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಿಂದ ಫಾಸ್ಟ್ ಟ್ಯಾಗ್ ಖರೀದಿಸದಂತೆ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ಅಂಗಸಂಸ್ಥೆಯಾಗಿರುವ ಭಾರತೀಯ ಹೆದ್ದಾರಿಗಳ ನಿರ್ಮಾಣ ಸಂಸ್ಥೆ ನಿಯಮಿತ(IHMCL) ಈ ಬಗ್ಗೆ ಮಾಹಿತಿ ನೀಡಿದೆ.
ಫಾಸ್ಟ್ ಟ್ಯಾಗ್ ಸಂಬಂಧಿತ 32 ಅಧಿಕೃತ ಬ್ಯಾಂಕುಗಳ ಪಟ್ಟಿಯನ್ನು IHMCL ಪ್ರಕಟಿಸಿದೆ. ಹೊಸ ಫಾಸ್ಟ್ ಟ್ಯಾಗ್ ಗಳಿಗೆ ಪಿಪಿಬಿ ಬಳಕೆ ಮಾಡದಂತೆ ಜನವರಿ 19ರಂದು IHMCL ತಿಳಿಸಿತ್ತು. ಗ್ರಾಹಕರ ಖಾತೆ ವ್ಯಾಲೆಟ್ ಫಾಸ್ಟ್ ಟ್ಯಾಗ್ ಗಳಿಂದ ಠೇವಣೆ ಇಲ್ಲದೆ ಟಾಪ್ ಅಪ್ ಸ್ವೀಕರಿಸುವುದನ್ನು ಫೆಬ್ರವರಿ 29ರ ನಂತರ ಸ್ಥಗಿತಗೊಳಿಸಬೇಕು ಎಂದು ಆರ್ಬಿಐ ನಿರ್ಬಂಧ ವಿಧಿಸಿ ಜನವರಿ 31 ರಂದು ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ IHMCL ಈ ಕ್ರಮ ಕೈಗೊಂಡಿದೆ.
ಅಂದ ಹಾಗೆ, ಭಾರತದಲ್ಲಿ ಸುಮಾರು 8 ಕೋಟಿಗೂ ಹೆಚ್ಚಿನ ಫಾಸ್ಟ್ ಟ್ಯಾಗ್ ಬಳಕೆದಾರರಿದ್ದು, ಇದರಲ್ಲಿ ಶೇಕಡ 30ರಷ್ಟು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಪಾಲು ಹೊಂದಿದೆ.