ಹೆದ್ದಾರಿಯಲ್ಲಿ ಸಂಚರಿಸುವ ಪ್ರತಿಯೊಂದು ವಾಹನಕ್ಕೆ ಫಾಸ್ಟ್ ಟ್ಯಾಗ್ ಅಗತ್ಯ. ಗ್ರಾಹಕರು 32 ಅಧಿಕೃತ ಬ್ಯಾಂಕ್‌ಗಳಿಂದ ಫಾಸ್ಟ್‌ಟ್ಯಾಗ್ ಖರೀದಿ ಮಾಡಬಹುದು. ಆದ್ರೆ ಪೇಟಿಎಂ ಪಾವತಿ ಬ್ಯಾಂಕ್ ಇದ್ರ ಅಡಿಯಲ್ಲಿ ಬರೋದಿಲ್ಲ. ಈಗಾಗಲೇ ಅನೇಕ ಗ್ರಾಹಕರು ಪೇಟಿಎಂ ಪಾವತಿ ಬ್ಯಾಂಕ್ ನಿಂದ ಫಾಸ್ಟ್ ಟ್ಯಾಗ್ ಖರೀದಿ ಮಾಡಿದ್ದಾರೆ. ಅವರಿಗೆ ಅದನ್ನು ರದ್ದು ಮಾಡಬಹುದು ಇಲ್ಲವೆ ಮರುಪಾವತಿಗೆ ವಿನಂತಿ ಮಾಡಬಹುದು. ಮಾರ್ಚ್ 15 ರವರೆಗೆ ಗಡುವನ್ನು ವಿಸ್ತರಿಸಲಾಗಿದ್ದು, ನಂತ್ರ ಪೇಟಿಎಂ ಫಾಸ್ಟ್ ಟ್ಯಾಗ್ ಕಾರ್ಯನಿರ್ವಹಿಸೋದಿಲ್ಲ. ಹಾಗಾಗಿ ನೀವು ಬೇರೆ ಬ್ಯಾಂಕ್ ನಿಂದ ಮಾರ್ಚ್ 15ರೊಳಗೆ ಫಾಸ್ಟ್ಯಾಗ್ ಖರೀದಿ ಮಾಡಿ.
ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಟ್ಯಾಗ್ ಐಡಿಯನ್ನು ಬಳಸಿಕೊಂಡು ನಿಮ್ಮ ಅಸ್ತಿತ್ವದಲ್ಲಿರುವ ಪೇಟಿಎಂ ಫಾಸ್ಟ್ಯಾಗ್ ಖಾತೆಯನ್ನು ನೀವು ಮುಚ್ಚಬಹುದು. ಇದನ್ನು ನೀವು ಸುಲಭವಾಗಿ ಮಾಡಬಹುದು. ನೀವು 1800-120-4210 ಗೆ ಕರೆ ಮಾಡಿ ಮತ್ತು ಫಾಸ್ಟ್ ಟ್ಯಾಗ್ ಗೆ ನೋಂದಾಯಿಸಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಬೇಕು. ವಾಹನ ನೋಂದಣಿ ಸಂಖ್ಯೆ ಅಥವಾ ಟ್ಯಾಗ್ ಐಡಿಯನ್ನು ಸಹ ನೀವು ನೀಡಬೇಕಾಗುತ್ತದೆ. ಇದರ ನಂತರ ಪೇಟಿಎಂ ಗ್ರಾಹಕ ಬೆಂಬಲ ಏಜೆಂಟ್ ನಿಮ್ಮನ್ನು ಸಂಪರ್ಕಿಸುತ್ತಾರೆ.
ಇದಲ್ಲದೆ ನೀವು ಪೇಟಿಎಂ ಅಪ್ಲಿಕೇಶನ್‌ನಲ್ಲಿ, ಪ್ರೊಫೈಲ್ ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು ಸಹಾಯ ಮತ್ತು ಬೆಂಬಲದ ಮೇಲೆ ಕ್ಲಿಕ್ ಮಾಡಿ. ಬ್ಯಾಂಕಿಂಗ್ ಸೇವೆಗಳು ಮತ್ತು ಪಾವತಿಗಳು ವಿಭಾಗದ ಅಡಿಯಲ್ಲಿ, ಫಾಸ್ಟ್ಯಾಗ್ ಆಯ್ಕೆ ಮಾಡಿ ಮತ್ತು ನಮ್ಮೊಂದಿಗೆ ಚಾಟ್ ಮಾಡಿ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆ ನಂತ್ರ ಕಾರ್ಯನಿರ್ವಾಹಕರು ನಿಮ್ಮ ಸಂಪರ್ಕಕ್ಕೆ ಬರುತ್ತಾರೆ. ಅವರಿಗೆ ಖಾತೆಯನ್ನು ನಿಷ್ಕ್ರಿಯಗೊಳಿಸುವಂತೆ ನೀವು ಸೂಚಿಸಬಹುದು.
ಹೊಸ ಫಾಸ್ಟ್ಯಾಗ್ ಖರೀದಿ ಹೇಗೆ ? ಆನ್‌ಲೈನ್‌ನಲ್ಲಿ ಹೊಸ ಫಾಸ್ಟ್‌ಟ್ಯಾಗ್ ಖರೀದಿಸಲು ನೀವು My FASTag ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಟ್ಯಾಗ್ ಅನ್ನು ಖರೀದಿಸಲು ಇ-ಕಾಮರ್ಸ್ ಲಿಂಕ್‌ಗೆ ಒತ್ತಿ ಫಾಸ್ಟ್‌ಟ್ಯಾಗ್ ಖರೀದಿಸಿ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇದರ ಮೂಲಕ ಫಾಸ್ಟ್ಯಾಗ್ ಖರೀದಿಸಿ
My FASTag ಅಪ್ಲಿಕೇಶನ್‌ನಲ್ಲಿ, ಫಾಸ್ಟ್ಯಾಗ್ ಸಕ್ರಿಯಗೊಳಿಸಿ ಮೇಲೆ ಕ್ಲಿಕ್ ಮಾಡಿ. ಅಮೆಜಾನ್ ಅಥವಾ ಫ್ಲಿಪ್ಕಾರ್ಟ್ ಆಯ್ಕೆಮಾಡಿ. ಫಾಸ್ಟ್ಯಾಗ್ ಐಡಿ ಮತ್ತು ನಿಮ್ಮ ವಾಹನದ ವಿವರಗಳನ್ನು ಅಲ್ಲಿ ನಮೂದಿಸಿ. ಆಗ ಅದು ಸಕ್ರಿಯವಾಗುತ್ತದೆ.
ನೀವು ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಬಿಐ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯೆಸ್ ಬ್ಯಾಂಕ್ ನಲ್ಲಿ ಫಾಸ್ಟ್ಯಾಗ್ ಖರೀದಿ ಮಾಡಬಹುದು.