ಬೆಂಗಳೂರು: ರಿಯಾಯಿತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಸಲು ಅವಧಿಯನ್ನು ಮತ್ತೆ 15 ದಿನ ವಿಸ್ತರಣೆ ಮಾಡಲಾಗಿದ್ದು, ಭಾರಿ ಮೊತ್ತದ ದಂಡ ಸಂಗ್ರಹವಾಗಿದೆ.
ಸಂಚಾರ ದಂಡ ಬಾಕಿ ಪಾವತಿಸಲು ಶೇಕಡ 50 ರಷ್ಟು ರಿಯಾಯಿತಿ ನೀಡಿ ದಂಡ ಪಾವತಿಗೆ ಮೂರನೇ ಸಲ ಅವಧಿ ವಿಸ್ತರಣೆ ಮಾಡಲಾಗಿದೆ. ಮಾರ್ಚ್ 4 ರಿಂದ 2,68,16,500 ರೂ.ದಂಡ ಪಾವತಿಸಲಾಗಿದೆ. ಕಳೆದ 4 ದಿನಗಳಲ್ಲಿ ಸುಮಾರು 93 ಸಾವಿರ ಕೇಸ್ ಇತ್ಯರ್ಥವಾಗಿವೆ ಎನ್ನಲಾಗಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಾಧ್ಯಕ್ಷ ನ್ಯಾಯಮೂರ್ತಿ ಬಿ. ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಜನವರಿ 27 ರಂದು ನಡೆದ ವಿಚಾರಣೆಯ ನಂತರ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಶೇಕಡ 50 ರಷ್ಟು ರಿಯಾಯಿತಿ ನೀಡಲು ನಿರ್ಧರಿಸಲಾಯಿತು. ಇದರ ಪ್ರಯೋಜನ ಪಡೆದು ಅನೇಕರು ಬಾಕಿ ಉಳಿಸಿಕೊಂಡ ದಂಡ ಪಾವತಿಸಿದ್ದಾರೆ. ಈ ಯೋಜನೆಯಡಿ ತಮ್ಮ ದಂಡವನ್ನು ಪಾವತಿಸಲು ಬಯಸುವ ಜನರು ಸ್ಥಳೀಯ ಸಂಚಾರ ಪೊಲೀಸ್ ಠಾಣೆಗೆ ಹೋಗಬಹುದು ಅಥವಾ ಕರ್ನಾಟಕ ಒನ್ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬಹುದಾಗಿದೆ.