alex Certify ‘ಮೊದಲು 25 ಕೆಜಿ ತೂಕ ಇಳಿಸಿ, ಆಮೇಲೆ ಆಡಿಷನ್​ ನೀಡು’ : ನಿರ್ದೇಶಕನಿಂದ ಮುಖಭಂಗಕ್ಕೊಳಗಾದ ಘಟನೆ ಬಿಚ್ಚಿಟ್ಟ ಖ್ಯಾತ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮೊದಲು 25 ಕೆಜಿ ತೂಕ ಇಳಿಸಿ, ಆಮೇಲೆ ಆಡಿಷನ್​ ನೀಡು’ : ನಿರ್ದೇಶಕನಿಂದ ಮುಖಭಂಗಕ್ಕೊಳಗಾದ ಘಟನೆ ಬಿಚ್ಚಿಟ್ಟ ಖ್ಯಾತ ನಟಿ

ನಟಿ ಪಾಯಲ್​ ಘೋಷ್​ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯೊಂದರ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದು ಈ ಘಟನೆ ಬಳಿಕ ತಾನು ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ನೋವನ್ನು ಅನುಭವಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

33 ವರ್ಷದ ಪಾಯಲ್​ ಇತ್ತೀಚಿಗೆ ಆಡಿಷನ್​ವೊಂದಕ್ಕೆ ತೆರಳಿದ್ದ ಸಂದರ್ಭದಲ್ಲಿ ನಿರ್ದೇಕರೊಬ್ಬರಿಂದ ಬಾಡಿ ಶೇಮಿಂಗ್​ ಮಾಡಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ನಾನು ದಪ್ಪವಾಗಿದ್ದೇನೆ ಎಂದು ಆಡಿಷನ್​ ಸೆಟ್​ನಿಂದ ನಿರ್ದೇಶಕ ನನ್ನನ್ನು ಹೊರಗೆ ಕಳಿಸಿದ್ದು ಮಾತ್ರವಲ್ಲದೇ ನನ್ನ ಎದುರೇ ಬಾಗಿಲು ಮುಚ್ಚಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ನಿರ್ದೇಶಕನ ಹೆಸರನ್ನು ಬಾಯ್ಬಿಡದ ನಟಿ ಪಾಯಲ್​, ಎಲ್ಲಾ ಗಾತ್ರದ ಹೆಣ್ಣುಮಕ್ಕಳ ಸಬಲೀಕರಣ ಮಾಡೋದ್ರಲ್ಲಿ ನನ್ನ ಇಂಡಸ್ಟ್ರಿ ಕೂಡ ಸುಧಾರಣೆ ಕಾಣುತ್ತಿದೆ ಎಂದು ನಾನು ಭಾವಿಸಿದ್ದೆ. ಆದರೆ ಈ ಘಟನೆಯು ನನ್ನನ್ನು ಸಂಪೂರ್ಣ ಛಿದ್ರಗೊಳಿಸಿದೆ. ಆಡಿಷನ್​ವೊಂದರಲ್ಲಿ ನನಗೆ ತೀವ್ರ ನೋವಾಗಿದೆ. ನಾವು ಅಂದುಕೊಂಡಿರುವ ಪಾತ್ರಕ್ಕೆ ನೀವು ಸರಿಹೊಂದುತ್ತಿಲ್ಲ ಎಂದು ಹೇಳಲು ಸಾಕಷ್ಟು ಮಾರ್ಗಗಳಿತ್ತು. ಆದರೆ ಆ ನಿರ್ದೇಶಕ ನನ್ನನ್ನು ಆಡಿಷನ್​ ಸೆಟ್​ನಿಂದ ತಳ್ಳಿದ್ದು ಮಾತ್ರವಲ್ಲದೇ ನನ್ನ ಮುಖದ ಮೇಲೆಯೇ ಬಾಗಿಲು ಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಮೊದಲು 25 ಕೆಜಿ ತೂಕ ಇಳಿಸಿಕೋ. ಆಮೇಲೆ ಆಡಿಷನ್​ ಕೊಡೋಕೆ ಬಾ ಎಂದು ಆ ನಿರ್ದೇಶಕ ನನ್ನ ಮುಖದ ಮೇಲೆ ಹೇಳಿದ್ದಾನೆ. ನನಗೆ ಪ್ರೊಲ್ಯಾಕ್ಟಿನ್​ ಹಾರ್ಮೋನ್​ ಸಮಸ್ಯೆಯಿದೆ. ಹೀಗಾಗಿ ನಾನು ತೂಕದಲ್ಲಿ ಏರಿಕೆ ಕಂಡಿದ್ದೇನೆ. ಆದರೆ ಆ ವ್ಯಕ್ತಿ ಕನಿಷ್ಟ ಮಾನವೀಯತೆ ತೋರಲಿಲ್ಲ. ನನ್ನನ್ನು ತಿರಸ್ಕರಿಸಿದರು ಎನ್ನುವುದಕ್ಕೆ ನನಗೆ ಯಾವುದೇ ರೀತಿಯ ಬೇಸರವಿಲ್ಲ. ಆದರೆ ಇಷ್ಟು ವರ್ಷಗಳ ಕಾಲ ಮನರಂಜನಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ನಾನು ಕನಿಷ್ಟ ಮಾನವೀಯತೆಯನ್ನು ನಿರೀಕ್ಷಿಸುವುದು ತಪ್ಪೇ..? ಯಾರು ಕೂಡ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ತಮ್ಮ ನೋವನ್ನು ಹೊರಹಾಕಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...