ಯಾರದಾದ್ರೂ ಬರ್ತ್ ಡೇ, ಗೃಹ ಪ್ರವೇಶ ಹೀಗೆ ಯಾವುದಾಕ್ಕಾದರೂ ಹೋದಾಗ ಗಿಫ್ಟ್ ಕೊಡುವುದು ಒಂದು ರೂಢಿ. ಆದರೆ ನಾವು ಕೊಡುವ ಗಿಫ್ಟ್ ಅವರಿಗೆ ಉಪಯೋಗಕ್ಕೆ ಬರುತ್ತದೆಯೋ ಇಲ್ವೋ ಎಂದು ಮೊದಲು ಯೋಚಿಸಿ ಕೊಡಬೇಕು.
ಯಾರಿಗಾದರೂ ಏನಾದರೂ ಗಿಫ್ಟ್ ಕೊಡುವ ಮೊದಲು ಆ ವಸ್ತುವಿನ ಅವಶ್ಯಕತೆ ಅವರಿಗೆ ಇದೆಯಾ ಎಂಬುದನ್ನು ಮೊದಲು ಯೋಚಿಸಿ.
ಸಿಕ್ಕಾಪಟ್ಟೆ ದುಡ್ಡು ಕೊಟ್ಟು ಗಿಫ್ಟ್ ತೆಗೆದುಕೊಂಡು ಹೋಗಿ ಕೊಟ್ಟಾಗ ಆ ವಸ್ತುವಿನ ಅವಶ್ಯಕತೆಯೇ ಅವರಿಗೆ ಇಲ್ಲದಿದ್ದರೆ ನೀವು ಕೊಟ್ಟ ಗಿಫ್ಟ್ ಬೆಲೆ ಕಳೆದುಕೊಳ್ಳುತ್ತದೆ. ನಿಮಗೆ ತೀರಾ ಪರಿಚಯದವರು ಆಗಿದ್ದರೆ ಮೊದಲು ಅವರ ಮನೆಯಲ್ಲಿ ಆ ವಸ್ತುವಿನ ಅಗತ್ಯ ಇದೆಯಾ…? ಎಂದು ತಿಳಿದುಕೊಳ್ಳಿ. ತುಂಬಾ ದುಬಾರಿ ಗಿಫ್ಟ್ ಅಲ್ಲದಿದ್ದರೂ ಕಡಿಮೆ ಬೆಲೆಯ, ಗುಣಮಟ್ಟದ ಗಿಫ್ಟ್ ಕೊಡಿ. ನೆಪ ಮಾತ್ರಕ್ಕೆ ಗಿಫ್ಟ್ ಕೊಡುವ ಬದಲು ಕೊಡದೇ ಇರುವುದೇ ಲೇಸು!
ಇನ್ನು ಹೂವಿನ ಬೊಕೆ ಇತ್ಯಾದಿಗಳನ್ನು ಕೊಡುವ ಮೊದಲು ಯೋಚಿಸಿ. ಅದೇ ದುಡ್ಡಲ್ಲಿ ಯಾವುದಾದರೂ ಚಿಕ್ಕ ಹೂವಿನ ಗಿಡ, ಅಥವಾ ತರಕಾರಿ/ಹಣ್ಣಿನ ಗಿಡ ಏನಾದರೂ ಕೊಡಿ. ಇದು ಉಪಯೋಗಕ್ಕೆ ಬರುತ್ತದೆ.