
ಮಕ್ಕಳಿಗೆ ಹೆಸರಿಡುವ ಪದ್ಧತಿ ಭಾರತದಲ್ಲಿದೆ. ಹೆಸರಿಡುವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡ್ತಾರೆ. ಆದ್ರೆ ಹೆಸರು ಮಾತ್ರ ಇತ್ತೀಚಿನ ದಿನಗಳಲ್ಲಿ ಅರ್ಥ ಕಳೆದುಕೊಳ್ಳುತ್ತಿದೆ. ಹೆಸರು ಕೂಡ ವ್ಯಕ್ತಿ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಮಕ್ಕಳಿಗೆ ಹೆಸರಿಡುವ ಮೊದಲು ಅನೇಕ ವಿಷ್ಯಗಳನ್ನು ಗಮನದಲ್ಲಿಡಬೇಕಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರ ಮಕ್ಕಳ ಜಾತಕದಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ. ಮಗು ಜನಿಸಿದ ಸಮಯ, ನಕ್ಷತ್ರ ಹಾಗೂ ರಾಶಿಯಲ್ಲಿ ಮಗುವಿಗೆ ಯಾವ ಹೆಸರಿಡಬೇಕೆನ್ನುವ ಬಗ್ಗೆ ಸೂಚನೆಯಿರುತ್ತದೆ. ಅದನ್ನು ಆಧರಿಸಿ ಹೆಸರನ್ನು ಇಡಬೇಕಾಗುತ್ತದೆ. ಇಟ್ಟ ಹೆಸರು ಅರ್ಥ ಕಳೆದುಕೊಳ್ಳಬಾರದು.
ಹಿಂದಿನ ದಿನಗಳಲ್ಲಿ ದೇವರ ಹೆಸರು, ತೀರ್ಥ ಸ್ಥಳ, ನದಿಗಳ ಹೆಸರನ್ನು ಇಡುತ್ತಿದ್ದರು. ಮಕ್ಕಳನ್ನು ಕೂಗುವ ವೇಳೆ ದೇವರ ಹೆಸರು ಬಾಯಿಂದ ಬಂದು ಪುಣ್ಯ ಲಭಿಸುತ್ತದೆ ಎಂದು ನಂಬಿದ್ದರು. ಆದ್ರೀಗ ಕಾಲ ಬದಲಾಗಿದೆ. ಜನರು ಬೇರೆ ಬೇರೆ ಹೆಸರುಗಳನ್ನು ಅನ್ವೇಷಣೆ ಮಾಡ್ತಿದ್ದಾರೆ. ಕೆಲ ಹೆಸರುಗಳಿಗೆ ಅರ್ಥವೇ ಇರೋದಿಲ್ಲ. ಇದು ಮುಂದೆ ಮಕ್ಕಳ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಜ್ಯೋತಿಷ್ಯರನ್ನು ಸಂಪರ್ಕಿಸಿ ಮಕ್ಕಳ ಜಾತಕಕ್ಕೆ ಹೊಂದುವ ಹೆಸರಿಡಲು ಪ್ರಯತ್ನಿಸಿ. ಇದು ಮಕ್ಕಳ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗುತ್ತೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.