ಆಧುನಿಕ ಕಾಲದಲ್ಲಿ ವಾಸ್ತುವಿಗೆ ಅನೇಕರು ಮಹತ್ವ ನೀಡ್ತಾ ಇದ್ದಾರೆ. ವಾಸ್ತು ಪ್ರಕಾರ ಮನೆ ನಿರ್ಮಾಣ ಮಾಡುವ ಜೊತೆಗೆ ಸಣ್ಣ ಪುಟ್ಟ ವಿಷಯಗಳ ಬಗ್ಗೆಯೂ ಗಮನ ನೀಡಬೇಕಾಗುತ್ತದೆ.
ದೇವರ ಮನೆಯಲ್ಲಿರಬೇಕಾದ ವಸ್ತು, ಅಡುಗೆ ಮನೆ, ಬೆಡ್ ರೂಂ ಸೇರಿದಂತೆ ಮನೆಯಲ್ಲಿರುವ ಪ್ರತಿಯೊಂದು ವಸ್ತು ಹಾಗೂ ಜಾಗಗಳ ಮಹತ್ವ ತಿಳಿದಿದ್ದರೆ ಒಳ್ಳೆಯದು. ನಾವು ಮಾಡುವ ಕೆಲವು ತಪ್ಪುಗಳು ನಮ್ಮ ಉನ್ನತಿಗೆ ಅಡ್ಡಿಯುಂಟು ಮಾಡುತ್ತದೆ.
ಬೆಳಗಿನ ಸಮಯದಲ್ಲಿ ಕೆಲ ಹೊತ್ತು ಭಜನೆ ಮಾಡುವುದು ಒಳ್ಳೆಯದು. ಇದ್ರಿಂದ ಮನೆಯ ಸದಸ್ಯರ ಮನಸ್ಸು ಶಾಂತವಾಗಿರುತ್ತದೆ. ನಕಾರಾತ್ಮಕ ಶಕ್ತಿಯ ನಾಶವಾಗುತ್ತದೆ.
ಪೊರಕೆಯನ್ನು ದೇವಿ ಲಕ್ಷ್ಮಿ ಎಂದು ಪರಿಗಣಿಸಲಾಗಿದೆ. ಹಾಗಾಗಿ ಎಂದೂ ಪೊರಕೆಯನ್ನ ಕಾಲಿನಲ್ಲಿ ಒದೆಯಬೇಡಿ. ಹಾಗೆ ಪೊರಕೆಯನ್ನು ಸದಾ ಮುಚ್ಚಿಡಿ.
ಹಾಸಿಗೆ ಮೇಲೆ ಕುಳಿತು ಊಟ ಮಾಡಬೇಡಿ. ಮೊದಲ ರೊಟ್ಟಿಯನ್ನು ಆಕಳಿಗಾಗಿ ಹಾಗೂ ಕೊನೆಯ ರೊಟ್ಟಿಯನ್ನು ನಾಯಿಗಾಗಿ ತೆಗೆದಿಡಿ. ಇದ್ರಿಂದ ದೇವರು ಖುಷಿಯಾಗುವ ಜೊತೆಗೆ ಪೂರ್ವಜರು ಶಾಂತವಾಗ್ತಾರೆ.
ಮನೆಯಲ್ಲಿ ಕಟ್ಟಿರುವ ಜೇಡರ ಬಲೆಯನ್ನು ತೆಗೆಯುತ್ತಿರಿ.
ಮನೆಯ ಒಂದೇ ಜಾಗದಲ್ಲಿ ಚಪ್ಪಲಿಯನ್ನು ಇಡಿ. ಅಲ್ಲಿ-ಇಲ್ಲಿ ಎಸೆಯುವುದರಿಂದ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ.
ವಾರಕ್ಕೊಮ್ಮೆ ಮನೆಗೆ ಉಪ್ಪು ನೀರನ್ನು ಸಿಂಪಡಿಸಿ. ಇದರಿಂದ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ.
ದೇವರ ಮನೆಯಲ್ಲಿರುವ ದೇವಿ ಮೂರ್ತಿಗೆ ಪ್ರತಿದಿನ ಪೂಜೆ ಮಾಡಬೇಕು. ಇದರಿಂದ ದೇವಿ ಖುಷಿಯಾಗಿರುವುದಲ್ಲದೇ ಮನೆಯಲ್ಲಿ ಸುಖ-ಸಂಪತ್ತು ನೆಲೆಸಿರುತ್ತದೆ.