ಚಳಿಗಾಲ ಸೋಮಾರಿತನವನ್ನು ಹೆಚ್ಚು ಮಾಡುತ್ತದೆ, ಜನರು ಚಳಿಯ ಕಾರಣಕ್ಕೆ ಸ್ನಾನ ಕೂಡ ಮಾಡುವುದಿಲ್ಲ. ಕೆಲವರು ಒಂದೇ ಬಟ್ಟೆಯನ್ನು ಮೂರ್ನಾಲ್ಕು ದಿನ ಧರಿಸುತ್ತಾರೆ. ಇದು ಬಹಳ ಅಪಾಯಕಾರಿ, ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ಒಳ ಉಡುಪನ್ನು ಪ್ರತಿ ದಿನ ಬದಲಿಸಬೇಕಾಗುತ್ತದೆ.
ಯಾವುದೇ ಋತುವಾಗಿದ್ದರೂ ಖಾಸಗಿ ಅಂಗದ ಸ್ವಚ್ಛತೆ ಬಹಳ ಮುಖ್ಯವಾಗುತ್ತದೆ. ಇದು ಆರೋಗ್ಯ ವೃದ್ಧಿ ಜೊತೆ ತಾಜಾತನದ ಅನುಭವ ನೀಡುತ್ತದೆ. ಖಾಸಗಿ ಅಂಗವನ್ನು ಸ್ವಚ್ಛಗೊಳಿಸದೆ, ಒಳ ಉಡುಪನ್ನು ಬದಲಿಸದೆ ಹೋದಲ್ಲಿ ಸೋಂಕು ಕಾಡುತ್ತದೆ. ಬಿಳಿ ಮುಟ್ಟಿನಿಂದ ಖಾಸಗಿ ಅಂಗ ಒದ್ದೆಯಾಗಿ ಅದ್ರಿಂದ ಯೋನಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತದೆ. ಇದ್ರಿಂದ ಖಾಸಗಿ ಅಂಗದಿಂದ ದುರ್ವಾಸನೆ ಬರುತ್ತದೆ.
ಖಾಸಗಿ ಅಂಗದ ಸುತ್ತ ಕೆಂಪು ಗುಳ್ಳೆಗಳಾಗುತ್ತವೆ. ಇದು ನೋವುಂಟು ಮಾಡುವ ಸಾಧ್ಯತೆಯಿದೆ. ಚಳಿಗಾಲದಲ್ಲಿ ಮಹಿಳೆಯರಿಗೆ ಯೋನಿ ಸೋಂಕು ಹೆಚ್ಚಾಗಿ ಕಾಡುತ್ತದೆ. ಖಾಸಗಿ ಅಂಗದ ಸ್ವಚ್ಛತೆ ಹಾಗೂ ಒಳ ಉಡುಪಿನ ಸ್ವಚ್ಛತೆ ಕೊರತೆ ಇದಕ್ಕೆ ಕಾರಣವಾಗುತ್ತದೆ. ಖಾಸಗಿ ಅಂಗವನ್ನು ಪ್ರತಿ ದಿನ ಎರಡು ಬಾರಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಬೇಕು. ಮನೆಯಲ್ಲಿ ಆರಾಮದಾಯಕ ಬಟ್ಟೆ ಧರಿಸಬೇಕು. ಬಿಗುವಿನ ಬಟ್ಟೆ ಧರಿಸಬಾರದು. ಖಾಸಗಿ ಅಂಗ ಒದ್ದೆಯಾಗದಂತೆ ನೋಡಿಕೊಳ್ಳಬೇಕು.
ಖಾಸಗಿ ಅಂಗಕ್ಕೆ ಸೋಪ್ ಹಾಕಬಾರದು. ಇದು ಕೂಡ ಸೋಂಕು ಹರಡಲು ಕಾರಣವಾಗುತ್ತದೆ. ಮುಟ್ಟಿನ ಸಮಯದಲ್ಲಿ ಒಂದೇ ಸ್ಯಾನಿಟರಿ ಪ್ಯಾಡ್ ಬಳಸಬೇಡಿ. ಪ್ರತಿ 6 ಗಂಟೆಗೊಮ್ಮೆ ಸ್ಯಾನಿಟರಿ ಪ್ಯಾಡ್ ಬದಲಿಸಿ.