ಆರೋಗ್ಯಕರ ಜೀವನಕ್ಕೆ ಒಳ್ಳೆ ಆಹಾರದ ಜೊತೆಗೆ ಮನೆಯ ಸ್ವಚ್ಛತೆ ಕೂಡ ಬಹಳ ಮುಖ್ಯ. ಹಾಗಾಗಿಯೇ ಮನೆಯನ್ನು ಸ್ವಚ್ಛವಾಗಿಡಲು ಮಾರುಕಟ್ಟೆಗೆ ಸಾಕಷ್ಟು ರಾಸಾಯನಿಕ ಪದಾರ್ಥಗಳು ಲಗ್ಗೆ ಇಟ್ಟಿವೆ. ನೆಲ ಸ್ವಚ್ಛಗೊಳಿಸಲೊಂದು, ಶೌಚಾಲಯಕ್ಕೊಂದು, ಬಾತ್ ರೂಂ ಗೊಂದು, ಗ್ಲಾಸ್ ಕ್ಲೀನ್ ಮಾಡಲು ಇನ್ನೊಂದು ಹೀಗೆ ಬೇರೆ ಬೇರೆ ಹೆಸರಿನಲ್ಲಿ ಸಾಕಷ್ಟು ರಾಸಾಯನಿಕ ವಸ್ತುಗಳು ಮಾರುಕಟ್ಟೆಯಲ್ಲಿ ಸಿಗುತ್ವೆ.
ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಆತುರದಲ್ಲಿ ನಾವೂ ಇದನ್ನು ಬಳಸ್ತಿದ್ದೇವೆ. ಪೂರ್ವಾಪರವಿಲ್ಲದೆ ಜಾಹೀರಾತು ನೋಡಿ ಮಾರುಹೋಗಿ ಮಾರುಕಟ್ಟೆಯಿಂದ ತಂದ ಈ ಕೆಮಿಕಲ್ಸ್ ನಮ್ಮ ಆರೋಗ್ಯ ಸುಧಾರಿಸುವ ಬದಲು ಹಾಳು ಮಾಡ್ತಾ ಇದೆ.
ಯಾವ ಪದಾರ್ಥ ನಮ್ಮ ದೇಹಕ್ಕೆ ಅಪಾಯಕಾರಿ ಎಂಬ ವಿವರ ಇಲ್ಲಿದೆ.
ಡಿಟರ್ಜೆಂಟ್ : ಬಟ್ಟೆ ತೊಳೆಯಲು ನಾವು ಸೋಪನ್ನು ಬಳಸ್ತೇವೆ. ಆದ್ರೆ ಇದಕ್ಕೆ Sodium lauryl sulfate, NPE ಕೆಮಿಕಲ್ ಬಳಸಲಾಗುತ್ತದೆ. ಇವು ಚರ್ಮದ ಸೋಂಕಿನ ಜೊತೆಗೆ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತವೆ.
ನಾನ್ ಸ್ಟಿಕ್ ಪಾತ್ರೆ : ಇತ್ತೀಚಿನ ದಿನಗಳಲ್ಲಿ ನಾನ್ ಸ್ಟಿಕ್ ಪಾತ್ರೆಯನ್ನು ಎಲ್ಲರ ಮನೆಯಲ್ಲಿಯೂ ನೋಡಬಹುದು. ಅಡುಗೆ ಮಾಡಲು ಸುಲಭ. ಹಾಗೆ ಅಡುಗೆ ತಳಕ್ಕೆ ಹಿಡಿಯುವುದಿಲ್ಲ. ಈ ನಾನ್ ಸ್ಟಿಕ್ ಪಾತ್ರೆ ಮಾಡಲು polytetrafluoroethylen ವನ್ನು ಬಳಸ್ತಾರೆ. ಇದು ಆಹಾರ ಜೀರ್ಣವಾಗುವ ಕ್ಷಮತೆಯನ್ನು ಕಡಿಮೆ ಮಾಡಿ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.
ಡಿಯೋ, ಸೆಂಟ್ : ಜನರು ಬೆವರಿನ ವಾಸನೆ ಹೋಗಲಾಡಿಸಲು ಡಿಯೋ, ಸೆಂಟ್ ಮೊರೆ ಹೋಗ್ತಾರೆ. ಸಂಶೋಧನೆಯೊಂದರ ಪ್ರಕಾರ ಇದು ನಮ್ಮ ದೇಹಕ್ಕೆ ಒಳ್ಳೆಯದಲ್ಲ. ಇದ್ರಲ್ಲಿ ಬಳಸುವ antiperspirants ಸ್ತನ ಕ್ಯಾನ್ಸರ್ ಗೆ ಕಾರಣವಾಗುತ್ತದೆ.
ಏರ್ ಪ್ರೆಶ್ನರ್ : ಮನೆಯನ್ನು ಸುವಾಸನೆಗೊಳಿಸಲು ಏರ್ ಪ್ರೆಶ್ನರ್ ಬಳಸುವವರು ನೀವಾಗಿದ್ದರೆ ಖರೀದಿಗೂ ಮೊದಲು ಪ್ಯಾಕ್ ಮೇಲೆ ಬರೆದಿರುವುದನ್ನು ಗಮನಿಸಿ. phthalates ಎಂದು ಬರೆದಿದ್ದರೆ ಆ ಪ್ರೆಶ್ನರ್ ಬಳಸಬೇಡಿ. ಇದು ಉಸಿರಾಟಕ್ಕೆ ಸಂಬಂಧಿಸಿದ ರೋಗಗಳಿಗೆ ಕಾರಣವಾಗುತ್ತದೆ.
ಕ್ಲೀನರ್ : ಮನೆ ಹಾಗೂ ಶೌಚಾಲಯ, ಬಾತ್ ರೂಂ ಕ್ಲೀನ್ ಮಾಡಲು ಕ್ಲೀನರ್ ಬಳಸುತ್ತೇವೆ. ಅದ್ರಲ್ಲಿರುವ Triclosan ಮತ್ತು Quaternary ಕೆಮಿಕಲ್ ಅನೇಕ ರೋಗಗಳಿಗೆ ಕಾರಣವಾಗುತ್ತದೆ.