ಮಕ್ಕಳು ಮೊಬೈಲ್ ಇಲ್ಲವೆ ಟಿವಿ ನೋಡುವುದು ವಿಪರೀತ ಹೆಚ್ಚಿದೆ. ಇದರಿಂದ ಮಕ್ಕಳ ಕಣ್ಣಿನ ಮೇಲೆ ಹಲವು ದುಷ್ಪರಿಣಾಮಗಳಾಗುತ್ತವೆ. ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
ಒಮೆಗಾ-3 ಕೊಬ್ಬಿನ ಆಮ್ಲ ಇರುವ ಆಹಾರಗಳನ್ನು ಮಕ್ಕಳಿಗೆ ಕೊಡಿ. ಮಕ್ಕಳು ಹಠ ಮಾಡುತ್ತಾರೆ ಎಂಬ ಕಾರಣಕ್ಕೆ ಹೆಚ್ಚು ಕರಿದ ತಿಂಡಿಗಳನ್ನು ತಯಾರಿಸಿ ಕೊಡದಿರಿ. ಮಕ್ಕಳಿಗೆ ಹಸಿರು ತರಕಾರಿಗಳನ್ನು ತಿನ್ನಲು ನೀಡಿ. ಹಲವು ಬಗೆಯ ಸಲಾಡ್ ಗಳನ್ನು ತಯಾರಿಸಿ ಕೊಡಿ.
ಮೊಟ್ಟೆಯಲ್ಲಿರುವ ವಿಟಮಿನ್ ಕಣ್ಣಿನ ಹಲವು ಸಮಸ್ಯೆಗಳನ್ನು ದೂರ ಮಾಡುತ್ತದೆ. ಕಿತ್ತಳೆ ಹಣ್ಣನ್ನು ಮಕ್ಕಳಿಗೆ ತಿನ್ನಿಸಿ. ಒಣ ಹಣ್ಣುಗಳನ್ನು ನೀರಿನಲ್ಲಿ ನೆನೆಸಿ ಇಲ್ಲವೇ ನೇರವಾಗಿ ತಿನ್ನಲು ಕೊಡಿ. ಇವುಗಳು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.