
1996ರಲ್ಲಿ ತೆರೆ ಕಂಡ ಈ. ವಿ.ವಿ ಸತ್ಯನಾರಾಯಣ ನಿರ್ದೇಶನದ ‘ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದ ಇವರು 1997 ರಲ್ಲಿ ‘ಗೋಕುಲಂಲೊ ಸೀತಾ’ ದಲ್ಲಿ ತೆರೆ ಹಂಚಿಕೊಂಡರು. ಬಳಿಕ ‘ಸುಸ್ವಾಗತಮ್’, ‘ತಮ್ಮುಡು’ ‘ಬದ್ರಿ’ ಜಾನಿ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದರು.
‘Bro’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಪವನ್ ಕಲ್ಯಾಣ್ ಇತ್ತೀಚಿಗೆ ‘og’ ಸೇರಿದಂತೆ ‘ಹರಿ ಹರ ವೀರ ಮಲ್ಲು’ ಹಾಗೂ ‘ಉಸ್ತಾದ್ ಭಗತ್ ಸಿಂಗ್’ ನಲ್ಲಿ ಅಭಿನಯಿಸಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿವೆ. ಇಂದು ಇವರ ಹುಟ್ಟು ಹಬ್ಬದ ಪ್ರಯುಕ್ತ ಮುಂಬರುವ ಸಿನಿಮಾಗಳ ಪೋಸ್ಟರ್ಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.