ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದಕ್ಕೆ ಪವಿತ್ರಾ ಗೌಡ ಕಣ್ಣೀರಿಟ್ಟಿದ್ದಾರೆ.
ಜೈಲಿನ ಡಿ ಬಾರಕ್ ನಲ್ಲಿ ಕುಳಿತು ಪವಿತ್ರಾ ಗೌಡ ಕಣ್ಣೀರಿಟ್ಟಿದ್ದಾರೆ. ನನ್ನಿಂದಲೇ ದರ್ಶನ್ ಗೆ ಇಂತಹ ಸ್ಥಿತಿ ಬಂತು ಎಂದು ಪವಿತ್ರಾ ಗೌಡ ಜೈಲಿನ ಡಿ ಬಾರಕ್ ನಲ್ಲಿ ಕುಳಿತು ರೋಧಿಸುತ್ತಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ. ಮತ್ತೊಂದೆಡೆ ಜೈಲು ಪಾಲಾಗಿರುವ ನಟ ದರ್ಶನ್ ಕೂಡ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ & ಗ್ಯಾಂಗ್ ನ್ನು ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 24ನೇ ಎಸಿಎಎಂ ಕೋರ್ಟ್ ಆದೇಶದ ನಂತರ ಪರಪ್ಪನ ಅಗ್ರಹಾರ ಜೈಲು ಸೇರಿದ ದರ್ಶನ್ ಮತ್ತು ಸಹಚರರಿಗೆ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ. ದರ್ಶನ್ 6106, ಧನರಾಜ್ 6107, ವಿನಯ್ 6108, ಪ್ರದೋಶ್ 6109 ಸಂಖ್ಯೆಯನ್ನು ನೀಡಲಾಗಿದೆ.ಭದ್ರತಾ ದೃಷ್ಟಿಯಿಂದ ದರ್ಶನ್ ಅವರನ್ನು ವಿಶೇಷ ಬ್ಯಾರಕ್ ನಲ್ಲಿ ಇರಿಸಲಾಗಿದೆ.