ಗೇಲಿಗೆ ಗುರಿಯಾಗಿದೆ ʼವ್ಯಾಕರಣʼ ದೋಷಗಳಿಂದ ಕೂಡಿದ ವಿಶ್ವವಿದ್ಯಾನಿಲಯದ ಸುತ್ತೋಲೆ 15-06-2022 9:10AM IST / No Comments / Posted In: Latest News, India, Live News ವಿಶ್ವವಿದ್ಯಾಲಯದ ಸುತ್ತೋಲೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯದ ವಸ್ತುವಾಗಿ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸಂಜಯ್ ಕುಮಾರ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಪಾಟ್ನ ವಿಶ್ವವಿದ್ಯಾಲಯದ ಹಾಜರಾತಿ ಕುರಿತ ಸುತ್ತೋಲೆ ಎಲ್ಲರ ಗಮನ ಸೆಳೆಯುತ್ತಿದೆ. ಜೂನ್ 10ರ ನೋಟೀಸ್, ಪಾಟ್ನಾ ವಿಶ್ವವಿದ್ಯಾನಿಲಯದ ಡೆಪ್ಯುಟಿ ರಿಜಿಸ್ಟ್ರಾರ್ ಮೂಲಕ ಎಲ್ಲಾ ಪಿಎಚ್‌ಡಿ ಸಂಶೋಧಕರಿಗೆ ಹಾಜರಾತಿ ರಿಜಿಸ್ಟರ್‌ನಲ್ಲಿನ ಮಾರ್ಕ್ ಮಾಡಲು ನಿರ್ದೇಶಿಸಲಾಗಿದೆ. ಅಲ್ಲಿ ಬಳಸಿದ ವ್ಯಾಕರಣ ಮತ್ತು ವಾಕ್ಯ ರಚನೆಯು ಭಯಾನಕವಾಗಿದೆ. ಅದೇನೇ ಇರಲಿ, ಅಸಡ್ಡೆ ಅಥವಾ ಅಸಮರ್ಥತೆ ನಮ್ಮ ಉನ್ನತ ಶಿಕ್ಷಣದ ಸ್ಥಿತಿಯನ್ನು ತಿಳಿಸುತ್ತದೆ ಎಂದು ಐಎಎಸ್ ಅಧಿಕಾರಿ ಅಭಿಪ್ರಾಯ ಬರೆದಿದ್ದಾರೆ. ಟ್ವೀಟ್‌ನಲ್ಲಿ ಬಿಹಾರದ ಶಿಕ್ಷಣ ಸಚಿವ ವಿಜಯ್ ಕುಮಾರ್ ಚೌಧರಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಬಶಿಕ್ಷಣ) ದೀಪಕ್ ಕುಮಾರ್ ಸಿಂಗ್ ಅವರಿಗೂ ಟ್ಯಾಗ್ ಮಾಡಿ ಗಮನ ಸೆಳೆದಿದ್ದಾರೆ. ಸುತ್ತೋಲೆ ಪರಿಶೀಲಿಸದೆ ಅದನ್ನು ಹೇಗೆ ಪ್ರಕಟಿಸಲಾಯಿತು ಎಂದು ಹಲವರು ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ ಮತ್ತು ಪ್ರಾಧ್ಯಾಪಕರ ಮೇಲೆ ಗುರುತರ ಆರೋಪ ಮಾಡಿದ್ದಾರೆ. ಅದೇನೇ ಇದ್ದರೂ, ಮುಜುಗರ ತಪ್ಪಿಸಲು ಪ್ರಾದೇಶಿಕ ಭಾಷೆಗಳಲ್ಲಿ ಸೂಚನೆ ಕೊಡಬಹುದಿತ್ತು ಎಂದು ಕೆಲವರು ಪ್ರತಿಪಾದಿಸಿದ್ದಾರೆ. ಸ್ಥಳೀಯ ವರದಿಯ ಪ್ರಕಾರ, ನೋಟಿಸ್‌ಗೆ ಜಾಲತಾಣದಲ್ಲಿ ಟೀಕೆ ವ್ಯಕ್ತವಾದ ನಂತರ, ಅದನ್ನು ಪರಿಷ್ಕರಿಸಿ ಪ್ರಕಟಿಸಲಾಯಿತು. here is a notice issued by a head of department of patna university.the grammar and syntax used is appalling for a professor.whatever it may be,carelessness or incompetence,conveys the state of our higher education.@BiharEducation_ @VijayKChy @DipakKrIAS pic.twitter.com/IBlSeS1wr5 — Sanjay Kumar (@sanjayjavin) June 12, 2022