alex Certify ಉಗುರಿನಲ್ಲಿ ಅರಳಿದೆ ಕೊರೊನಾ ಜಾಗೃತಿ ಸಂದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಗುರಿನಲ್ಲಿ ಅರಳಿದೆ ಕೊರೊನಾ ಜಾಗೃತಿ ಸಂದೇಶ

Patna Artist Paints Her Nails, Writes Get Vaccinated on Her Thumb to Raise Covid-19 Awareness

ಪಾಟ್ನಾ ಮೂಲದ ಕಲಾವಿದೆಯೊಬ್ಬರು ಉಗುರಿನ ಮೇಲೆ ಲಸಿಕೆಯ ಬಗ್ಗೆ ಜಾಗೃತಿ ಸಂದೇಶ ಮೂಡಿಸಿ ಗಮನ ಸೆಳೆಯುತ್ತಿದ್ದಾರೆ. ಇದೊಂದು ವಿನೂತನ ಸೃಜನಾತ್ಮಕ ಪ್ರಯೋಗವಾಗಿದ್ದು, ಕೋವಿಡ್ ಮತ್ತು ಲಸಿಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ರಜನಿ ರಂಜನ್ ತನ್ನ ವಿವಿಧ ಬೆರಳಿನ ಉಗುರಿನ ಮೇಲೆ ಬಣ್ಣ ಬಳಿದು, ಲಸಿಕೆ ಬಗ್ಗೆ ಸಂದೇಶ ಬರೆದು, ಜನರಿಗೆ ಲಸಿಕೆ ಹಾಕುವಂತೆ ಪ್ರೇರೇಪಿಸುತ್ತಿದ್ದಾರೆ. ತನ್ನ ಹೆಬ್ಬೆರಳ ಉಗುರಿನ ಮೇಲೆ , “Get vaccinated” (ಲಸಿಕೆ ಹಾಕಿಸಿಕೊಳ್ಳಿ) ಎಂದು ಕುಂಚದಲ್ಲೇ ಬಳೆದಿರುವ, 26 ವರ್ಷದ ರಂಜನಿ, ಸ್ವಯಂ ಕಲಿತ ವಿದ್ಯೆಯಿಂದ ಲಸಿಕೆ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಜನರು ಮಾಸ್ಕ್ ಧರಿಸಬೇಕೆಂದು ಹೇಳುತ್ತಿದ್ದಾರೆ ಕೂಡ.

ಕ್ವಾರಂಟೈನ್‍ ನಲ್ಲಿರುವ ಮಹಿಳಾ ಕ್ರಿಕೆಟಿಗರ ಪಾಡು ಹೇಳತೀರದು…!

ಕಳೆದ ಆರು ವರ್ಷದಿಂದ ತನ್ನ ಉಗುರಿನ ಮೇಲೆ ವಿವಿಧ ಸಂದೇಶ ಮೂಡಿಸುತ್ತಿರುವ ರಜಿನಿ, ಬಿಹಾರ ಪ್ರವಾಸೋದ್ಯಮ, ಟೋಕಿಯೋ 2020 ಮತ್ತೆ ಇನ್ನಿತರ ಸಂದರ್ಭದಲ್ಲಿ ತನ್ನ ಉಗುರನ್ನು ಬಳಸುತ್ತಿರುವುದು ವಿಶೇಷವಾಗಿದೆ. ಇತ್ತೀಚೆಗೆ ಮೀರಾಬಾಯಿ ಚಾನು, ನೀರಜ್ ಚೋಪ್ರಾ ಅವರ ಮುಖಚಿತ್ರಗಳನ್ನು ಉಗುರಿನ ಮೇಲೆ ಬರೆದದ್ದು ಗಮನ ಸೆಳೆದಿತ್ತು. ಪದವೀಧರಳಾದ ರಜಿನಿ ತನ್ನದೇ ಆದ ನೈಲ್ ಆರ್ಟ್ ಸ್ಟುಡಿಯೋ ಪ್ರಾರಂಭಿಸಬೇಕೆಂಬ ಇಚ್ಛೆ ಇದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...