ಪಾಟ್ನಾ: ಪಾಟ್ನಾದ ರಾಮ್ ಕೃಷ್ಣಾ ನಗರದಲ್ಲಿ ಮೂವರು ಯುವಕರು 28 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ.
ಜಹಾನಾಬಾದ್ ಜಿಲ್ಲೆಯ ನಿವಾಸಿಯಾಗಿರುವ ಯುವತಿ ಬಿಹಾರದಲ್ಲಿ ಮದುವೆಗಳು, ಹುಟ್ಟುಹಬ್ಬದ ಪಾರ್ಟಿಗಳು ಮತ್ತು ಸಾಂಸ್ಕೃತಿಕ ಕೂಟಗಳಲ್ಲಿ ಹಾಡುವ ಸ್ಥಳೀಯ ಗಾಯಕಿಯಾಗಿದ್ದಾರೆ.
ಆಕೆಯ ಹೇಳಿಕೆಯ ಪ್ರಕಾರ, ಮೂವರು ಯುವಕರು ಮದುವೆಯ ಆರತಕ್ಷತೆಗೆ ಹಾಡಲು ಒಪ್ಪಂದ ಮಾಡಿಕೊಂಡಿದ್ದರು. ಸಂತ್ರಸ್ತೆ ಸ್ಥಳಕ್ಕೆ ಹೋದಾಗ ಅಲ್ಲಿ ಅಂತಹ ಯಾವುದೇ ಕಾರ್ಯಕ್ರಮ ಆಯೋಜಿಸಿರಲಿಲ್ಲ. ಮೂವರು ಯುವಕರು ಸ್ಥಳದಲ್ಲಿದ್ದರು. ಆಕೆಯತ್ತ ಬಂದೂಕು ತೋರಿಸಿ ಒಬ್ಬೊಬ್ಬರಾಗಿ ಅತ್ಯಾಚಾರವೆಸಗಿದರು. ಘಟನೆಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದೂ ಸಂತ್ರಸ್ತೆ ಹೇಳಿಕೊಂಡಿದ್ದಾರೆ.
ಅವರಿಂದ ತಪ್ಪಿಸಿಕೊಂಡು ಪೊಲೀಸರನ್ನು ಸಂಪರ್ಕಿಸಿದ್ದಾಳೆ. ರಾಮ್ ಕೃಷ್ಣ ನಗರ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ನಾವು ತಕ್ಷಣ ಅಪರಾಧ ಸ್ಥಳಕ್ಕೆ ತಲುಪಿ ಸಂತ್ರಸ್ತೆಯನ್ನು ರಕ್ಷಿಸಿದ್ದೇವೆ. ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ ಬಂಧಿತರಿಂದ ಪಿಸ್ತೂಲ್ ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದರು.
ವಿಚಾರಣೆ ವೇಳೆ ಪಿಂಟು ಕುಮಾರ್ ಎಂಬ ಆರೋಪಿಗೆ ಸಂತ್ರಸ್ತೆಯ ಪರಿಚಯವಿರುವುದು ಪತ್ತೆಯಾಗಿದೆ. ಮದುವೆಯ ಆರತಕ್ಷತೆಯಲ್ಲಿ ಹಾಡಲು ಆಕೆಯನ್ನು ಬುಕ್ ಮಾಡಿದ್ದಾರೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ.