ಹೈದರಾಬಾದ್: ಐಸಿಯುನಲ್ಲಿದ್ದ ರೋಗಿಯ ಬಲಗೈ ಬೆರಳು ಮತ್ತು ಪಾದಗಳಿಗೆ ಇಲಿ ಕಡಿದ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಬಳಿಕ 43 ವರ್ಷದ ರೋಗಿಯನ್ನು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆಯಲ್ಲಿ ಇಲಿ ಕಡಿದಿವೆ. ಘಟನೆಯ ಮಾಹಿತಿಯನ್ನು ತಿಳಿದ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ತನಿಖೆಗೆ ಆದೇಶಿಸಿದ್ದಾರೆ. ಸಂಬಂಧಿಸಿದ ಆಸ್ಪತ್ರೆ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ.
ಐಸಿಯು ಪಕ್ಕದಲ್ಲಿ ನವೀಕರಣ ಕಾರ್ಯ ನಡೆಯುತ್ತಿದ್ದು, ಅಲ್ಲಿಂದ ಇಲಿಗಳು ಐಸಿಯು ಒಳಗೆ ಬಂದಿರಬಹುದು. ರೋಗಿಯ ಸಂಬಂಧಿಕರು ಆಹಾರ ಪದಾರ್ಥಗಳನ್ನು ಹಾಸಿಗೆ ಪಕ್ಕದಲ್ಲಿ ಇಟ್ಟಿದ್ದು, ಅವುಗಳನ್ನು ತಿನ್ನಲು ಬಂದ ಇಲಿಗಳು ಬೆರಳು ಕಚ್ಚಿವೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.