ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಡೇವಿಡ್ ಹೃದಯದ ಕಸಿ ಅಳವಡಿಕೆ ಯಶಸ್ವಿಯಾಗಿದ್ದರೂ ಮೃತಪಟ್ಟಿದ್ದಾರೆ. 58 ವರ್ಷದ ಡೇವಿಡ್ ಬೆನಟ್ ಅವರಿಗೆ ಹಂದಿ ಹೃದಯದ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಅಮೆರಿಕದ ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್ ವಿವಿ ಪ್ರಕಟಣೆ ನೀಡಿದೆ
2022ರ ಜನವರಿ 11ರಂದು ಡೇವಿಡ್ ಹಂದಿ ಹೃದಯದ ಕಸಿ ಮಾಡಿಸಿಕೊಂಡಿದ್ದರು. ಇತ್ತೀಚಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಡೇವಿಡ್ ಬೆನಟ್ ನಿಧನರಾಗಿದ್ದಾರೆ.
ಹಂದಿಯ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮೊದಲ ವ್ಯಕ್ತಿ ಎರಡು ತಿಂಗಳ ನಂತರ ಮಂಗಳವಾರ ಮಧ್ಯಾಹ್ನ ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದಲ್ಲಿ ನಿಧನರಾದರು. ಮೇರಿಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದ ಡೇವಿಡ್ ಬೆನೆಟ್ ಸೀನಿಯರ್ ಅವರಿಗೆ 57 ವರ್ಷ. ಅವರು ತೀವ್ರ ಹೃದ್ರೋಗ ಹೊಂದಿದ್ದರು. ಅವರ ಸಾವಿನ ಸಮಯದಲ್ಲಿ ಯಾವುದೇ ಸ್ಪಷ್ಟ ಕಾರಣವನ್ನು ಗುರುತಿಸಲಾಗಿಲ್ಲ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.
ಅವರ ವೈದ್ಯರು ಇನ್ನೂ ಸಂಪೂರ್ಣ ಪರೀಕ್ಷೆಯನ್ನು ನಡೆಸಬೇಕಾಗಿರುವುದರಿಂದ ಸಾವಿನ ಕಾರಣದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಅವರು ಫಲಿತಾಂಶಗಳನ್ನು ಪೀರ್-ರಿವ್ಯೂಡ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟಿಸಲು ಯೋಜಿಸಿದ್ದಾರೆ.