ಮಂಗಳೂರು: ಪಟಾಕಿ ಮಳಿಗೆಗೆ ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೆ ತಂದಿರುವುದು ವಿಶ್ವ ಹಿಂದೂ ಪರಿಷತ್ ಆಕ್ರೋಶಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿಯಾಗಿದೆ. ಹಿಂದೂ ಹಬ್ಬಗಳ ಸಂದರ್ಭದಲ್ಲಿ ಬೇಡದ ನಿಯಮಗಳನ್ನು ಜಾರಿ ಮಾಡಿದೆ ಎಂದು ವಿಶ್ವ ಹಿಂದೂ ಪರಿಷತ್ ಕಿಡಿ ಕಾರಿದೆ.
ಹಬ್ಬದ ಸಂದರ್ಭಗಳಲ್ಲಿ ಅನಗತ್ಯ ನಿಯಮ ಜಾರಿಗೆ ತಂದು ಹಬ್ಬದ ಆಚರಣೆಗೆ ಅಡ್ಡಿ ಮಾಡಲಾಗುತ್ತಿದೆ. ಗಣೇಶ ಹಬ್ಬದ ಸಂದರ್ಭದಲ್ಲಿಯೂ ಬಾಂಡ್ ಸೇರಿದಂತೆ ಹಲವು ನಿಯಮಗಳನ್ನು ಜಾರಿಗೆ ತಂದಿತು. ಈಗ ವಿಶ್ಯದಾದ್ಯಂತ ಹಿಂದೂಗಳು ಆಚರಿಸುವ ಬೆಳಕಿನ ಹಬ್ಬ ದೀಪಾವಳಿಗೆ ಅಡ್ಡಿ ಪಡಿಸಲಾಗುತ್ತಿದೆ. ಸರ್ಕರದ ಈ ನೀತಿ ಸರಿಯಲ್ಲ ಎಂದು ಹೇಳಿದೆ.
ಮಂಗಳೂರಿನಲ್ಲಿ ಮೂರು ಮೈದಾನಗಳಲ್ಲಿ ಮಾತ್ರ ಪಟಾಕಿ ಮಾರಬೇಕು ಎಂದು ಹೇಳಲಾಗುತ್ತಿದೆ. ಹಿಂದೂಗಳನ್ನು ದಮನ ಮಾಡಲು ಈ ನಿಯಮ ಮಾಡಲಾಗುತ್ತಿದೆ. ಇಷ್ಟು ಬಲವಾಗಿ ನಿಯಮ ಜಾರಿ ಮಾಡುವುದಾದರೆ ಮೈಕ್ ನಿಯಮ ಜಾರಿ ಮಾಡಲಿ. ಮಸೀದಿಗಳಲ್ಲಿ ಜೋರಾಗಿ ಕೂಗುತ್ತಿರುವ ಮೈಕ್ ಗಳನ್ನು ಮೊದಲು ನಿಲ್ಲಿಸಲಿ ಎಂದು ಆಗ್ರಹಿಸಿದೆ.
ಮೈಕ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿಯಮ ಪಾಲನೆ ಆಗಿದೆಯಾ? ಹಿಂದೂಗಳ ಹಬ್ಬಕ್ಕೆ ಅಡ್ಡಿ ಉಂಟುಮಾಡಬೇಕು ಎಂಬ ಧೋರಣೆ ಸರ್ಕಾರದ್ದಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಮರುಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದೆ.