ಹಾವಿನ ಕಡಿತ ತನ್ನನ್ನೇನೂ ಮಾಡುವುದಿಲ್ಲ, ಅದು ತನಗೆ ರೋಗನಿರೋಧಕ ವರ್ಧಕವೆಂದು ಪ್ರತಿಪಾದಿಸಿದ್ದ ಅಮೆರಿಕದ ಪಾದ್ರಿ ಜೇಮೀ ಕೂಟ್ಸ್ ವಿಷಕಾರಿ ಹಾವಿನ ಕಡಿತದಿಂದ ಸಾವನ್ನಪ್ಪಿದ್ದಾರೆ. ಅವರ ಕೊನೆ ಕ್ಷಣದ ವಿಡಿಯೋ ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿದ್ದು ಭಾರೀ ವೀಕ್ಷಣೆಗಳೊಂದಿಗೆ ಗಮನ ಸೆಳೆದಿದೆ.
ಮಾಹಿತಿಯ ಪ್ರಕಾರ ಅಮೆರಿಕದ ಕೆಂಟುಕಿಯ ಪಾದ್ರಿ ಜೇಮೀ ಕೂಟ್ಸ್ ಅವರು ಹಾವಿನ ಕಡಿತದಿಂದ ರೋಗನಿರೋಧಕ ಶಕ್ತಿಯನ್ನು ಪಡೆದುಕೊಂಡಿದ್ದೇನೆ ಎಂದಿದ್ದರು. ತಮ್ಮ ಹೇಳಿಕೆಯನ್ನು ಸಾಬೀತುಪಡಿಸಲು ಅವರನ್ನು ಕಾರ್ಯಕ್ರಮಕ್ಕೆ ಕರೆಸಲಾಯಿತು. ಆದರೆ ಅವರು ದುರದೃಷ್ಟವಶಾತ್ ನಿಧನರಾದರು. ಈ ವಿಡಿಯೋವನ್ನ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಅತಿರೇಕದ ಸೇವೆಗಳನ್ನು ನಡೆಸುವುದಕ್ಕಾಗಿ ಜೇಮೀ ಕೂಟ್ಸ್ ಸಾರ್ವಜನಿಕರಲ್ಲಿ ಹೇಗೆ ವಿವಾದಾತ್ಮಕ ವ್ಯಕ್ತಿಯಾಗಿದ್ದರು ಎಂಬುದನ್ನು ವೀಡಿಯೊ ತೋರಿಸುತ್ತದೆ.
ಕ್ಲಿಪ್ ಪ್ರಕಾರ ಅವರು ಜೀವಂತ ಹಾವುಗಳನ್ನು ಚರ್ಚ್ ಸೇವೆಗೆ ತಂದಿದ್ದರು. ಅವರ ಈ ಕೃತ್ಯವನ್ನು ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ ಸಹ ತೋರಿಸಿದೆ. ಸ್ವತಃ ಜೇಮೀ ಕೂಟ್ಸ್ ಸೇರಿದಂತೆ ಜನ ಹಾವಿನ ವಿಷವು ಅವರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನಂಬಿದ್ದರು.
ಯಾಕೆಂದರೆ 20 ವರ್ಷಗಳಲ್ಲಿ ಅವರು 8 ಬಾರಿ ವಿಷಕಾರಿ ಹಾವಿನಿಂದ ಕಚ್ಚಿಸಿಕೊಂಡು ಬದುಕುಳಿದಿದ್ದರು. ಎಂದಿನಂತೆ ಚರ್ಚ್ ನಲ್ಲಿ ಹಾವು ಹಿಡಿದು ಪ್ರದರ್ಶನ ನೀಡುತ್ತಿದ್ದಾಗ ವಿಷಕಾರಿ ಹಾವೊಂದು ಕಚ್ಚಿದೆ. ಬಳಿಕ ವಿಶ್ರಾಂತಿ ಪಡೆಯಲು ತೆರಳಿದ ಅವರು ಪ್ರಜ್ಞೆ ತಪ್ಪಿದ್ದರು.
ಆಸ್ಪತ್ರೆಗೆ ಕರೆದೊಯ್ದರೂ ಬದುಕುಳಿಯಲಿಲ್ಲ. ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು, ಹಾವುಗಳೊಂದಿಗೆ ಇಂತಹ ಮೂರ್ಖತನದ ಆಟಗಳನ್ನು ನಿಲ್ಲಿಸಿ ಎಂದಿದ್ದಾರೆ.