ಶಿಕ್ಷಣ/ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಹಾಗೂ ಟೋಕಿಯೋ ಒಲಿಂಪಿಕ್ಸ್‌ಗೆ ಭಾರತೀಯ ತಂಡದ ಭಾಗವಾಗಿ ಹೊರಹೋಗಲಿರುವ ಮಂದಿಗೆ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣಪತ್ರವನ್ನು ಪಾಸ್‌ಪೋರ್ಟ್‌ಗಳೊಂದಿಗೆ ಲಿಂಕ್ ಮಾಡಬೇಕಾಗುತ್ತದೆ.
ಆಗಸ್ಟ್ 31ರವರೆಗೆ ನಿರ್ದಿಷ್ಟ ಕಾರಣಗಳಿಗೆ ವಿದೇಶಕ್ಕೆ ತೆರಳಬೇಕಿರುವ ಮಂದಿಗೆ ಎರಡನೇ ಡೋಸ್ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಕೋವಿನ್ ಲಸಿಕಾ ಪ್ರಮಾಣಪತ್ರ ಲಿಂಕ್ ಆಗಿರುವ ಪಾಸ್‌ಪೋರ್ಟ್ ಪಡೆದುಕೊಳ್ಳಲು ಸಹ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಲಸಿಕೆಯ ಹೆಸರು ಕೋವಿಶೀಲ್ಡ್ ಎಂದು ಇದ್ದರೆ ಮತ್ಯಾವುದೇ ಅರ್ಹತಾ ಎಂಟ್ರಿಗಳು ಬೇಕಾಗುವುದಿಲ್ಲವೆಂದು ಹೊಸ ನಿಯಮಗಳು ತಿಳಿಸುತ್ತವೆ. ಹೀಗಾಗಿ ವಿದೇಶಗಳಲ್ಲಿ ಒಪ್ಪಿತವಾದ ಲಸಿಕೆ ಎಂದರೆ ಕೋವಿಶೀಲ್ಡ್ ಮಾತ್ರವೇ ಎಂಬ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.
“ಭಾರತದ ಸೀರಂ ಸಂಸ್ಥೆ ಅಭಿವೃದ್ದಿಪಡಿಸಿದ ಹಾಗೂ ಮದ್ದು ನಿಯಂತ್ರಣ ಪ್ರಾಧಿಕಾರ ಅನುಮೋದಿಸಿರುವ ಕೋವಿಶೀಲ್ಡ್ ಅನ್ನು ಬಳಕೆ ಮಾಡಬಹುದಾದ ಲಸಿಕೆಗಳಲ್ಲಿ ಒಂದೆಂದು ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ಕೊಟ್ಟಿದೆ” ಎಂದು ಇದೇ ವೇಳೆ ಸರ್ಕಾರದ ಪ್ರಕಟಣೆಯೊಂದರಲ್ಲಿ ತಿಳಿಸಲಾಗಿದೆ.