ತನ್ನ ಜೀವನ ಸಂಗಾತಿಯನ್ನು ಪರೀಕ್ಷಾ ಕೋಣೆಯಲ್ಲಿ ಕಂಡುಕೊಳ್ಳುತ್ತೇನೆಂದು ಪಾಯಲ್ ಶರ್ಮಾ ತಮ್ಮ ಕನಸಿನಲ್ಲೂ ಊಹಿಸಿರಲಿಲ್ಲ. ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಅರಸಿ ಹೊರಟಿರುವ ಪಾಯಲ್‌ಗೆ ದೃಷ್ಟಿ ಸವಾಲಿದೆ.
ಪಾಯಲ್ ತಮ್ಮ ಸಂಗಾತಿ ಹಾರ್ದಿಕ್ ದೇವ್ ಅವರನ್ನು ಮೊದಲ ಬಾರಿಗೆ ಪರಿಚಯ ಮಾಡಿಕೊಂಡಿದ್ದು ಪರೀಕ್ಷೆಯಲ್ಲಿ ಬರೆಯಲು ತಮ್ಮ ಸಹಾಯಕರಾಗಿ. ಸಂಸ್ಕೃತದಲ್ಲಿ ಬಿಎ ಪದವಿ ಪೂರೈಸಿರುವ ಹಾರ್ದಿಕ್‌ರನ್ನು ಪಾಯಲ್ ಕಳೆದ ನಾಲ್ಕು ವರ್ಷಗಳಿಂದ ಬಲ್ಲರು. ಪರೀಕ್ಷಾ ಕೋಣೆಯ ನಾಲ್ಕು ಗೋಡೆಗಳ ನಡುವೆಯೇ ಇಬ್ಬರ ಭೇಟಿಗಳು ನಡೆಯುತ್ತಿದ್ದವು.
ಇಬ್ಬರ ನಡುವಿನ ಈ ಬಾಂಧವ್ಯ ಹಂತಹಂತವಾಗಿ ಪ್ರೇಮಾಂಕುರಗೊಂಡು ಇದೀಗ ತಮ್ಮ ಕುಟುಂಬಗಳ ಮನವೊಲಿಸಿ ಮದುವೆ ಮಾಡಿಕೊಳ್ಳುವ ಹಂತಕ್ಕೆ ಬಂದಿದ್ದಾರೆ.
ಸೆಪ್ಟೆಂಬರ್ 2020ರಂದು, ನಾಲ್ಕು ವರ್ಷಗಳಿಂದ ತಮ್ಮ ಮನದಲ್ಲಿದ್ದ ಮಾತುಗಳನ್ನು ಹೇಳಿದ ಹಾರ್ದಿಕ್‌ಗೆ ಇಲ್ಲವೆನ್ನಲಾಗದ ಪಾಯಲ್, ಮದುವೆಗೆ ಒಪ್ಪಿದ್ದಾರೆ.
“ಜ್ಯೋತಿಷಿಯೂ ಆಗಿದ್ದ ನನಗೆ ಮದುವೆ ಸಂಬಂಧ 10 ಪ್ರಸ್ತಾಪಗಳು ಬಂದಿದ್ದವು. ಅದರಲ್ಲಿ ಕೆಲವರಿಗೆ ನಾನು ಜ್ಯೋತಿಷ್ಯದ ಮೇಲಿನ ನನ್ನ ಇಚ್ಛೆಯನ್ನು ಬಿಟ್ಟು ಬದುಕಿಗಾಗಿ ಬೇರೇನೋ ಮಾಡಬೇಕೆಂದುಕೊಂಡಿದ್ದರು. ನಾನೇನಾಗಿದ್ದೆನೋ ಹಾಗೆಯೇ ನನ್ನನ್ನು ಮೆಚ್ಚಿಕೊಂಡಿದ್ದ ಪಾಯಲ್ ಮೇಲೆ ನನಗೆ ಆಳವಾದ ಪ್ರೀತಿ ಬೆಳೆದಿತ್ತು. ಆಕೆಯ ಸನ್ನಡತೆ ಹಾಗೂ ಮನೋಬಲ ನನ್ನ ಹೃದಯ ಗೆದ್ದಿದೆ,” ಎಂದು ಹಾರ್ದಿಕ್ ತಮ್ಮ ಭಾವಿ ಪತ್ನಿಯ ಬಗ್ಗೆ ಹೇಳಿಕೊಂಡಿದ್ದಾರೆ.