ಹೈದರಾಬಾದ್: ತೆಲಂಗಾಣದ ಹೈದರಾಬಾದ್ ನಲ್ಲಿ ಶನಿವಾರ ದುಬೈನಿಂದ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರೊಬ್ಬರಿಂದ 61.72 ಲಕ್ಷ ರೂ. ಮೌಲ್ಯದ 1144 ಗ್ರಾಂ ಚಿನ್ನಾಭರಣವನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿದೆ. ಪ್ರಯಾಣಿಕ ತನ್ನ ಒಳಉಡುಪುಗಳಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದ ಎಂದು ಕಸ್ಟಮ್ ಇಲಾಖೆಯಿಂದ ತಿಳಿದುಬಂದಿದೆ. ಪ್ರಯಾಣಿಕನ ವಿರುದ್ಧ ಚಿನ್ನ ಕಳ್ಳಸಾಗಣೆ ಪ್ರಕರಣ ದಾಖಲಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಹೆಚ್ಚಿನ ತನಿಖೆ ಆರಂಭವಾಗಿದೆ.
ತೆಲಂಗಾಣದ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಹಿಂದಿರುಗಿದ ಪ್ರಯಾಣಿಕರಿಂದ 2715.800 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಕಸ್ಟಮ್ಸ್ ಇಲಾಖೆ ಪ್ರಕಾರ, ಜನವರಿ 21 ರಂದು ದುಬೈನಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನೊಬ್ಬ ತನ್ನ ಲಗೇಜ್ನಲ್ಲಿ 2.715 ಕೆಜಿ ತೂಕದ ಚಿನ್ನದ ಸರ ಮತ್ತು ಚಿನ್ನದ ಪೇಸ್ಟ್ ಅನ್ನು ಜಾಣ್ಮೆಯಿಂದ ಬಚ್ಚಿಟ್ಟಿದ್ದ. ಖಚಿತ ಮಾಹಿತಿ ಮೇರೆಗೆ ಶೋಧ ನಡೆಸಲಾಗಿದ್ದು, ಒಂದು ಕೋಟಿ 36 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಪತ್ತೆಯಾಗಿದೆ.
ತಪಾಸಣೆ ವೇಳೆ ಪತ್ತೆಯಾದ ಚಿನ್ನದ ಬಗ್ಗೆ ಪ್ರಯಾಣಿಕರು ಸ್ಪಷ್ಟ ಮಾಹಿತಿ ನೀಡದಿರುವುದು ಹಾಗೂ ಬಿಲ್ ಇತ್ಯಾದಿಗಳನ್ನು ಹಾಜರುಪಡಿಸಲು ಸಾಧ್ಯವಾಗದ ಕಾರಣ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.