ಬೆಂಗಳೂರು: ದೀಪಾವಳಿ ನಂತರದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಹುಬ್ಬಳ್ಳಿ- ಯಶವಂತಪುರ ನಡುವೆ ಎರಡೂ ಕಡೆಯಿಂದ ತಲಾ ಒಂದು ಟ್ರಿಪ್ ವಿಶೇಷ ರೈಲು ಓಡಿಸಲು ನೈರುತ್ಯ ರೈಲ್ವೆ ಮುಂದಾಗಿದೆ.
ವಿಶೇಷ ಎಕ್ಸ್ಪ್ರೆಸ್ ರೈಲು ನವೆಂಬರ್ 3ರಂದು ರಾತ್ರಿ 8 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಡಲಿದ್ದು, ಮರುದಿನ ಮುಂಜಾನೆ 3.30ಕ್ಕೆ ಯಶವಂತಪುರ ತಲುಪಲಿದೆ.
ನವೆಂಬರ್ 4ರಂದು ಬೆಳಿಗ್ಗೆ 4:45ಕ್ಕೆ ಯಶವಂತಪುರದಿಂದ ಹೊರಟು ಅದೇ ದಿನ ಮಧ್ಯಾಹ್ನ 12.50ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ತಲುಪಲಿದೆ.
21 ಬೋಗಿಗಳಿರುವ ಈ ರೈಲು ಎರಡೂ ಕಡೆಗಳಿಂದ ಚಲಿಸುವಾಗ ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಕಡೂರು, ಅರಸೀಕೆರೆ, ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.