ಸಾಮಾನ್ಯವಾಗಿ ವಾಹನ ಸ್ಟಾರ್ಟ್ ಆಗದಿದ್ದ ಸಂದರ್ಭದಲ್ಲಿ ಸ್ವಲ್ಪ ದೂರ ತಳ್ಳುವುದನ್ನು ನೋಡಿರುತ್ತೀರಿ. ಅದೇ ರೀತಿಯ ಘಟನೆ ನೇಪಾಳದಲ್ಲಿ ನಡೆದಿದೆ.
ನೇಪಾಳದ ಬಾಜುರಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ವಿಮಾನ ನಿಲ್ದಾಣದಲ್ಲಿ ರನ್ ವೇನಿಂದ ವಿಮಾನವನ್ನು ಜನರೆಲ್ಲ ಸೇರಿಕೊಂಡು ತಳ್ಳಿದ ಘಟನೆ ನಡೆದಿದೆ. ತಾರಾ ಏರ್ ಲೈನ್ಸ್ ಗೆ ಸೇರಿದ ವಿಮಾನದ ಟೈಯರ್ ಸ್ಪೋಟಗೊಂಡು ಏರ್ ಸ್ಟ್ರಿಪ್ ನಲ್ಲಿ ಸಿಲುಕಿಕೊಂಡಿದ್ದು, ಅಲ್ಲಿದ್ದ ಜನರೊಂದಿಗೆ ಸೇರಿ ನಿಲ್ದಾಣದ ಸಿಬ್ಬಂದಿ ವಿಮಾನವನ್ನು ತಳ್ಳಿದ್ದಾರೆ.
ಲ್ಯಾಂಡಿಂಗ್ ಸಂದರ್ಭದಲ್ಲಿ ಹಿಂದಿನ ಟೈಯರ್ ಸ್ಪೋಟಗೊಂಡ ಪರಿಣಾಮ ಈ ಘಟನೆ ನಡೆದಿದೆ. ಪೈಲಟ್ ಸುರಕ್ಷಿತವಾಗಿ ವಿಮಾನ ಇಳಿಸಿದರೂ, ರನ್ ವೇಯಿಂದ ವಿಮಾನವನ್ನು ಸರಿಸಲು ಸಾಧ್ಯವಾಗದಿದ್ದಾಗ ಪ್ರಯಾಣಿಕರು ಮತ್ತು ಸಿಬ್ಬಂದಿ ವಿಮಾನವನ್ನು ತಳ್ಳಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.