alex Certify ಪ್ರಯಾಣಿಕರೆ ಗಮನಿಸಿ: 8 ರೈಲುಗಳ ಸಂಚಾರ ರದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರೆ ಗಮನಿಸಿ: 8 ರೈಲುಗಳ ಸಂಚಾರ ರದ್ದು

ಬೆಂಗಳೂರು: ನಿಟ್ಟೂರು -ಸಂಪಿಗೆ ರೈಲ್ವೆ ನಿಲ್ದಾಣ ನಡುವಿನ ಲೆವೆಲ್ ಕ್ರಾಸಿಂಗ್ ನಲ್ಲಿ ಗರ್ಡರ್ ಅಳವಡಿಕೆ ಕಾಮಗಾರಿ ಹಿನ್ನೆಲೆಯಲ್ಲಿ ಜೂನ್ 27ರಿಂದ ಜುಲೈ 4ರ ವರೆಗೆ ಈ ಮಾರ್ಗದ ಎಂಟು ರೈಲುಗಳ ಸಂಚಾರ ರದ್ದು ಪಡಿಸಲಾಗಿದೆ. ಕೆಲವು ರೈಲುಗಳ ಸಂಚಾರ ಭಾಗಶಃ ರದ್ದು ಮಾಡಲಾಗಿದೆ.

ತುಮಕೂರು –ಚಾಮರಾಜನಗರ, ಚಾಮರಾಜನಗರ –ಮೈಸೂರು, ಚಾಮರಾಜನಗರ –ಯಶವಂತಪುರ, ಯಶವಂತಪುರ –ಚಾಮರಾಜನಗರ, ತುಮಕೂರು -ಕೆಎಸ್ಆರ್ ಬೆಂಗಳೂರು, ಕೆಎಸ್ಆರ್ ಬೆಂಗಳೂರು –ತುಮಕೂರು, ಯಶವಂತಪುರ –ಶಿವಮೊಗ್ಗ, ಶಿವಮೊಗ್ಗ- ಯಶವಂತಪುರ ರೈಲುಗಳ ಸಂಚಾರ ರದ್ದು ಮಾಡಲಾಗಿದೆ.

ಕೆಎಸ್ಆರ್ ಬೆಂಗಳೂರು –ತುಮಕೂರು -ಕೆಎಸ್ಆರ್ ಬೆಂಗಳೂರು ರೈಲುಗಳನ್ನು ಹಿರೇಹಳ್ಳಿ ತುಮಕೂರು ನಡುವೆ ಭಾಗಶಃ ರದ್ದುಪಡಿಸಲಾಗಿದೆ. ತಾಳಗುಪ್ಪ -ಕೆಎಸ್ಆರ್ ಬೆಂಗಳೂರು ರೈಲು, ತಾಳಗುಪ್ಪ -ಕೆಎಸ್ಆರ್ ಬೆಂಗಳೂರು, ಕೆಎಸ್ಆರ್ ಬೆಂಗಳೂರು -ಧಾರವಾಡ ಇಂಟರ್ಸಿಟಿ ರೈಲುಗಳು ಅರಸಿಕೆರೆ -ಬೆಂಗಳೂರು ಭಾಗಶ: ರದ್ದು ಮಾಡಲಾಗಿದೆ.

ವಾಸ್ಕೋಡಗಾಮ –ಯಶವಂತಪುರ, ಮೈಸೂರು –ವಾರಣಾಸಿ, ಯಶವಂತಪುರ –ಜೈಪುರ, ವಿಶ್ವಮಾನವ ಮೈಸೂರು -ಬೆಳಗಾವಿ ರೈಲು ಅರಸೀಕೆರೆ, ಹಾಸನ, ನೆಲಮಂಗಲ ಮೂಲಕ ಯಶವಂತಪುರಕ್ಕೆ ಬರಲಿದೆ. ಮೈಸೂರು- ಉದಯಪುರ ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ, ದಾವಣಗೆರೆಗೆ ತೆರಳಲಿದೆ.

ಬಿಕಾನೇರ್ -ಯಶವಂತಪುರ ರೈಲು ಜೂನ್ 25ರಿಂದ ಜುಲೈ 2ರವರೆಗೆ ಸುಮಾರು 2.30 ಗಂಟೆ ತಡವಾಗಿ ಸಂಚರಿಸಲಿದೆ. ಉಳಿದಂತೆ ಯಶವಂತಪುರ –ನಿಜಾಮುದ್ದೀನ್, ಕೆಎಸ್ಆರ್ ಬೆಂಗಳೂರು –ತಾಳಗುಪ್ಪ, ಬೆಳಗಾವಿ- ಮೈಸೂರು, ಚಾಮರಾಜನಗರ- ತುಮಕೂರು, ಯಶವಂತಪುರ- ವಾಸ್ಕೋಡಗಾಮ, ತುಮಕೂರು -ಶಿವಮೊಗ್ಗ ರೈಲುಗಳ ಸಮಯವನ್ನು 10 ರಿಂದ 55 ನಿಮಿಷದವರೆಗೆ ಬದಲಾಯಿಸಲಾಗಿದೆ,

ಯಶವಂತಪುರ –ವಾಸ್ಕೋಡಗಾಮ ರೈಲು 60 ನಿಮಿಷ ವಿಳಂಬವಾಗಲಿದೆ. ತುಮಕೂರು -ಶಿವಮೊಗ್ಗ ನಗರ ಒಂದೂವರೆ ಗಂಟೆ ವಿಳಂಬವಾಗಿ ಸಂಚರಿಸುತ್ತದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ. ಇದರಿಂದ ಈ ಮಾರ್ಗದ ಮೂಲಕ ಸಂಚರಿಸುವ ಉತ್ತರ ಕರ್ನಾಟಕ, ತುಮಕೂರು ಭಾಗದ ಪ್ರಯಾಣಿಕರಿಗೆ ತೊಂದರೆಯಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...