alex Certify ರೈಲಿನಲ್ಲಿ ಧೂಮಪಾನ ಸೇವನೆ ಬಗ್ಗೆ ದೂರು: ರೈಲ್ವೆ ಇಲಾಖೆ ಪ್ರತಿಕ್ರಿಯೆಗೆ ನೆಟ್ಟಿಗರ ಅಸಮಾಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನಲ್ಲಿ ಧೂಮಪಾನ ಸೇವನೆ ಬಗ್ಗೆ ದೂರು: ರೈಲ್ವೆ ಇಲಾಖೆ ಪ್ರತಿಕ್ರಿಯೆಗೆ ನೆಟ್ಟಿಗರ ಅಸಮಾಧಾನ

ರೈಲ್ವೇ ಕಾಯಿದೆಯ ಸೆಕ್ಷನ್ 167 ರ ಅಡಿಯಲ್ಲಿ ರೈಲುಗಳ ಒಳಗೆ ಅಥವಾ ರೈಲ್ವೆ ಆವರಣದಲ್ಲಿ ಧೂಮಪಾನ ಅಥವಾ ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ. ಇಂತಹ ಕಾನೂನಿದ್ದರೂ ಕೆಲವರು ರೈಲಿನಲ್ಲಿ ಪ್ರಯಾಣಿಸುವಾಗ ಸಿಗರೇಟ್ ಸೇದಿದ್ದು ಅದರ ಬಗ್ಗೆ ದೂರಿದ ವ್ಯಕ್ತಿಗೆ ರೈಲ್ವೆ ಇಲಾಖೆ ನೀಡಿರುವ ಪ್ರತಿಕ್ರಿಯೆ ಹಲವರ ವಿರೋಧಕ್ಕೆ ಕಾರಣವಾಗಿದೆ.

ಭಾನುವಾರ, ಟ್ವಿಟರ್ ಬಳಕೆದಾರ ಮನೀಶ್ ಜೈನ್ (@jainmanish0906) ರೈಲಿನೊಳಗೆ ವ್ಯಕ್ತಿಯೊಬ್ಬ ಸಿಗರೇಟ್ ಹಚ್ಚುತ್ತಿರುವ ಫೋಟೋ ಮತ್ತು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ರೈಲು, ಸೀಟ್ ಸಂಖ್ಯೆ ಮತ್ತು ಕೋಚ್‌ನ ವಿವರಗಳನ್ನು ಹಂಚಿಕೊಂಡ ಜೈನ್, ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಮತ್ತು ರೈಲ್ವೆ ಸಚಿವಾಲಯವನ್ನು ಟ್ಯಾಗ್ ಮಾಡಿ ಸಿಗರೇಟ್ ಸೇದುವ ವ್ಯಕ್ತಿ ಹಿರಿಯ ನಾಗರಿಕರು ಮತ್ತು ಮಕ್ಕಳ ಮುಂದೆ ಧೂಮಪಾನ ಮಾಡಬೇಡಿ ಎಂದು ಕೇಳುವವರನ್ನು ನಿಂದಿಸಿದ್ದಾರೆ ಎಂದು ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೇ ಸೇವಾ ಅಧಿಕೃತ ಟ್ವಿಟ್ಟರ್ ಖಾತೆಯು ರೈಲು ಪ್ರಯಾಣಿಕರಿಗೆ ಮತ್ತಷ್ಟು ಮಾಹಿತಿ ನೀಡುವಂತೆ ಕೇಳಿದೆ. “ಸರ್, ದಯವಿಟ್ಟು ಪ್ರಯಾಣದ ವಿವರಗಳನ್ನು (PNR/UTS ಸಂಖ್ಯೆ) ಮತ್ತು ಮೊಬೈಲ್ ಸಂಖ್ಯೆಯನ್ನು ಸಂದೇಶದ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಲು ನಾವು ನಿಮ್ಮನ್ನು ವಿನಂತಿಸುತ್ತೇವೆ. ನೀವು ನೇರವಾಗಿ http://railmadad.indianrailways.gov.in ನಲ್ಲಿ ನಿಮ್ಮ ಕಾಳಜಿಯನ್ನು ವ್ಯಕ್ತಪಡಿಸಬಹುದು ಅಥವಾ ತ್ವರಿತ ಪರಿಹಾರಕ್ಕಾಗಿ 139 ಅನ್ನು ಡಯಲ್ ಮಾಡಬಹುದು. ಎಂದು ತಿಳಿಸಿದೆ.

ಈ ಟ್ವೀಟ್‌ನ ನಂತರ ಮನೀಶ್ ಜೈನ್ ಅವರು “ಆರ್‌ಪಿಎಫ್ ಸಿಬ್ಬಂದಿ ಬಂದಿಕುಯಿ ನಿಲ್ದಾಣಕ್ಕೆ ಬಂದಿದ್ದಾರೆ ಮತ್ತು ರೈಲಿನಲ್ಲಿ ಸಿಗರೇಟ್ ಸೇದದಂತೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾರೆ” ಎಂದು ಮಾಹಿತಿಯನ್ನ ಪೋಸ್ಟ್ ಮಾಡಿದ್ದಾರೆ. ಆದಾಗ್ಯೂ ಸಮಸ್ಯೆ ದೂರಿದ ವ್ಯಕ್ತಿಗೆ ರೈಲ್ವೆ ಇಲಾಖೆಯ ಪ್ರತಿಕ್ರಿಯೆಗೆ ನೆಟ್ಟಿಗರು ಬೇಸರಗೊಳ್ಳುವಂತೆ ಮಾಡಿದೆ.

ಅಂತಹ ಜನರನ್ನು ತಡೆಯಲು ಕೇವಲ ಎಚ್ಚರಿಕೆ ಸಾಕಾಗುವುದಿಲ್ಲ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ವಾದಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...