ವನ್ಯಜೀವಿ ಕಳ್ಳಸಾಗಣೆ ವಿಶ್ವದ ಎರಡನೇ ಅತಿದೊಡ್ಡ ಕಪ್ಪು ಮಾರುಕಟ್ಟೆಯಾಗಿದೆ. 20ರ ಹರೆಯದ ವ್ಯಕ್ತಿಯೊಬ್ಬ ಮೂರು ಹಲ್ಲಿಗಳು ಮತ್ತು ಎರಡು ಹಾವುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ್ದ. ಆದರೆ ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಘಟನೆಯ ಚಿತ್ರಗಳು ಮತ್ತು ವಿಡಿಯೋವನ್ನು ಹಂಚಿಕೊಂಡಿದೆ.
ಈ ಆರೋಪಿ ಪ್ರಾಣಿಗಳನ್ನು ಟಿನ್‌ಫಾಯಿಲ್‌ನಲ್ಲಿ ಸುತ್ತಿ ಮತ್ತು ಅವುಗಳನ್ನು ತಿಂಡಿ ಎಂದು ಹೇಳುವ ಮೂಲಕ ಊಟದ ಪೆಟ್ಟಿಗೆಯಲ್ಲಿ ಹಾಕಿದ್ದ. ಇಸ್ರೇಲ್ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇನ್ಸ್‌ಪೆಕ್ಟರ್‌ಗಳು ವ್ಯಕ್ತಿಯ ಪ್ಯಾಕೇಜುಗಳನ್ನು ಹುಡುಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅವರು ಊಟದ ಬಾಕ್ಸ್ ಮತ್ತು ಒಂದು ಜೊತೆ ಸಾಕ್ಸ್‌ಗಳಲ್ಲಿ ಹಾವುಗಳು ಮತ್ತು ಹಲ್ಲಿಗಳನ್ನು ನೋಡಿದ್ದಾರೆ.
ಶಂಕಿತ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಪ್ರಯಾಣಿಕನು ಪ್ಲಾಸ್ಟಿಕ್ ಕಂಟೇನರ್‌ನಲ್ಲಿ ಖಾಲಿ ತಿಂಡಿ ಚೀಲಗಳು ಮತ್ತು ಟಿನ್ ಫಾಯಿಲ್‌ನಲ್ಲಿ ಇವುಗಳನ್ನು ಸಾಗಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.