
ಮಧ್ಯಪ್ರದೇಶದ ರತ್ಲಾಮ್ ನಿಲ್ದಾಣದಲ್ಲಿ ಚಲಿಸುವ ರೈಲು ಹತ್ತುವಾಗ ಸಂಭವಿಸಿದ ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವ್ಯಕ್ತಿ ತನ್ನ ಸಾಮಾನು ಸರಂಜಾಮುಗಳನ್ನು ಕೋಚ್‌ಗೆ ಎಸೆದು ನಂತರ ರೈಲು ಏರಲು ಪ್ರಯತ್ನಿಸುತ್ತಿರುವುದನ್ನು ದೃಶ್ಯಾವಳಿ ತೋರಿಸುತ್ತದೆ.
ವ್ಯಕ್ತಿ ರೈಲು ಹತ್ತಲು ಮುಂದಾದ್ರೂ ಸಾಧ್ಯವಾಗದೇ ಸ್ಲಿಪ್ ಆಗುತ್ತಾರೆ. ಇದನ್ನು ಗಮನಿಸಿದ ಮಹಿಳಾ ಕಾನ್ಸ್ ಟೇಬಲ್ ತಕ್ಷಣ ಎಚ್ಚೆತ್ತುಕೊಂಡು ಓಡಿಬಂದು ಅವರನ್ನು ಫ್ಲಾಟ್ ಫಾರ್ಮ್ ಕಡೆ ಎಳೆದುಕೊಂಡು ಪ್ರಾಣ ಉಳಿಸಿದ್ದಾರೆ.
ಚಲಿಸುತ್ತಿರುವ ಇಂದೋರ್-ಜೋಧ್‌ಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ.