
ಮಧ್ಯಪ್ರದೇಶದ ಗ್ವಾಲಿಯರ್ ರೈಲು ನಿಲ್ದಾಣದಲ್ಲಿ ಗುರುವಾರ 24 ಗಂಟೆಯೊಳಗೆ ಮೂವರ ಸಾವಿನ ವರದಿಯಾಗಿವೆ. ಅದರಲ್ಲಿ ಇಬ್ಬರು ಬಿಸಿ ಗಾಳಿಯಿಂದ ಸಾವನ್ನಪ್ಪಿದ್ದಾರೆ.
ಮೊದಲ ಘಟನೆಯಲ್ಲಿ, ಬೇಸಿಗೆ ವಿಶೇಷ ರೈಲಿನ ಜನರಲ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ 75 ವರ್ಷದ ಶೇಶಿಕಲಾ ಎಂಬ ವೃದ್ಧೆ ನೀರು ಪಡೆಯಲು ಪ್ಲಾಟ್‌ಫಾರ್ಮ್ ನಂಬರ್ 2ರಲ್ಲಿ ಇಳಿದಿದ್ದಾರೆ. ರೈಲು ಚಲಿಸಲು ಪ್ರಾರಂಭಿಸುತ್ತಿದ್ದಂತೆ ಅವರು ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸಿದರು.
ಈ ಪ್ರಯತ್ನದಲ್ಲಿ ಸಮತೋಲನ ತಪ್ಪಿ ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವೆ ಬಿದ್ದಿದ್ದಾರೆ. ವೃದ್ಧೆಯನ್ನು JAH ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ವೃದ್ಧೆ ಗಂಗಾ ಸ್ನಾನಕ್ಕಾಗಿ ರಿಷಿಕೇಶಕ್ಕೆ ಇತರರೊಂದಿಗೆ ಪ್ರಯಾಣಿಸುತ್ತಿದ್ದರು.
ಮತ್ತೊಂದು ಘಟನೆಯಲ್ಲಿ, ಪ್ಲಾಟ್‌ಫಾರ್ಮ್ ನಂಬರ್ ಒಂದರ ಹೊರಗೆ ಪ್ರಯಾಣಿಕರೊಬ್ಬರು ಕುಸಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಚಿಕಿತ್ಸೆಗಾಗಿ ಗ್ವಾಲಿಯರ್‌ಗೆ ಬಂದಿದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಬಿಸಿ ಶಾಖದ ಹೊಡೆತದಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಮೂರನೇ ಘಟನೆಯಲ್ಲಿ, ಗ್ವಾಲಿಯರ್ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 4 ರ ಬಳಿ ವಯಸ್ಸಾದ ಪ್ರಯಾಣಿಕರ ಶವ ಪತ್ತೆಯಾಗಿದೆ. ಮೃತರು ಸುಮಾರು 60 ರಿಂದ 65 ವರ್ಷ ವಯಸ್ಸಿನವರು ಎಂದು ಅಂದಾಜಿಸಲಾಗಿದೆ. ಅವರು ಹೀಟ್ ಸ್ರೋತದಕ್ ನಿಂದ ಸಾವನ್ನಪ್ಪಿರೋ ಶಂಕೆಯಿದೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.