ಎಂದಿನಂತೆ ಶ್ರೀಬಾಲು ಅವರು ರೈಲ್ವೆ ಬೋಗಿಯೊಂದನ್ನು ಏರಿಕೊಂಡು ಅಲ್ಲಿನ ಪ್ಯಾಸೆಂಜರ್ ಸೀಟುಗಳ ಕೆಳಗೆ ಮತ್ತು ಶೌಚಾಲಯಗಳಲ್ಲಿ ಇಲಿ ಮತ್ತು ಇತರ ಕ್ರಿಮಿಕೀಟಗಳ ನಿಯಂತ್ರಣಕ್ಕಾಗಿ ಔಷಧ ಸಿಂಪಡಣೆ ಕಾರ್ಯದಲ್ಲಿ ನಿರತರಾಗಿದ್ದರು. ಚೆನ್ನೈಗೆ ಆಗ ತಾನೆ ಬಂದು ನಿಂತಿದ್ದ ರೈಲು ಅದು. ಹೀಗೆ ಬೋಗಿಯಿಂದ ಬೋಗಿಗೆ ಸಾಗುತ್ತಿದ್ದಾಗ ಸೀಟುವೊಂದರ ಕೆಳಗಡೆಯಲ್ಲಿ ‘ಪ್ಲೇಟ್’ ಒಂದು ಬಿದ್ದಿರುವಂತೆ ಬಾಲು ಅವರಿಗೆ ಕಂಡಿತು.
ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಕೊನೆಗೂ ಗುಡ್ ನ್ಯೂಸ್: ಟ್ರಾನ್ಸ್ಫರ್ ಅಧಿಸೂಚನೆ ಶೀಘ್ರ
ಸ್ವಲ್ಪ ಹೊತ್ತು ದೂರದಿಂದಲೇ ಅದನ್ನು ಪರೀಕ್ಷಿಸಿ, ಬಳಿಕ ಸೀಟಿನ ಕೆಳಗೆ ಬಾಗಿಕೊಂಡು ಎತ್ತಿಕೊಂಡರು. ಆತನ ಸಹಚರರನ್ನು ಕರೆದು ವಿಚಾರಿಸಿದಾಗ , ಅದೊಂದು ಲ್ಯಾಪ್‌ಟಾಪ್ ಎಂದು ತಿಳಿಯಿತು. ಅದರಲ್ಲೂ ಆ್ಯಪಲ್ ಕಂಪನಿಯ ಸುಮಾರು 2 ಲಕ್ಷ ರೂ. ಬೆಲೆಬಾಳುವ ಲ್ಯಾಪ್‌ಟಾಪ್ ಅದಾಗಿತ್ತು.
ರೈಲಿನಲ್ಲಿ ಚೆನ್ನೈಗೆ ಬಂದಿಳಿದ ಐಟಿ ಸಾಫ್ಟ್‌ವೇರ್ ಇಂಜಿನಿಯರ್ ಸೆಂಥಿಲ್ ಕುಮಾರ್ ಸುಮಾರು ಒಂದು ಗಂಟೆಯ ಬಳಿಕ ತನ್ನ ಬ್ಯಾಗ್‌ನಲ್ಲಿ ಲ್ಯಾಪ್‌ಟಾಪ್ ಇಲ್ಲ ಎನ್ನುವುದು ಅರಿವಿಗೆ ಬಂದಿತು. ಗಾಬರಿಗೊಂಡ ಅವರು ಕ್ಷಣಕಾಲ ದಿಕ್ಕೇ ತೋಚದಂತಾದರು. ಇನ್ನೂ ಸ್ವಲ್ಪ ಹೊತ್ತಾದ ಮೇಲೆ ಸೆಂಥಿಲ್‌ಗೆ ಅರಿವಾಗಿದ್ದು, ’ತಾನು ಹೊತ್ತುಕೊಂಡಿರುವ ಬ್ಯಾಗ್ ಕೂಡ ತನ್ನದಲ್ಲ’ ಎನ್ನುವುದು ! ಗಡಿಬಿಡಿಯಲ್ಲಿ ಅವರು ಪಕ್ಕದವರ ಬ್ಯಾಗ್ ಎತ್ತುಕೊಂಡು ಬಂದಿದ್ದರು. ಅದಲು ಬದಲಾಗಿದ್ದವು ಬ್ಯಾಗ್‌ಗಳು.
ಮನ ಮಿಡಿಯುವಂತಿದೆ ವೃದ್ಧೆಯ ಅಂತಿಮ ಆಸೆಯನ್ನು ಆಸ್ಪತ್ರೆ ಸಿಬ್ಬಂದಿ ಪೂರ್ಣಗೊಳಿಸಿದ ಕ್ಷಣ…..!
ಕೊನೆಗೆ ಸ್ವಲ್ಪ ಸಮಾಧಾನ ಮಾಡಿಕೊಂಡ ಸೆಂಥಿಲ್ ಅವರು ಬ್ಯಾಗ್ ಒಳಗಿದ್ದ ಪುಸ್ತಕವೊಂದರಲ್ಲಿನ ಸಂಖ್ಯೆಯ ಮೊಬೈಲ್ ಕರೆ ಮಾಡಿದಾಗ, ಬ್ಯಾಗ್‌ನ ಅಸಲಿ ಮಾಲೀಕರು ಸಿಕ್ಕರು. ಅವರು ರೈಲು ನಿಲ್ದಾಣದಲ್ಲೇ ಇದ್ದರು ಎನ್ನುವುದು ತಿಳಿದು, ಸೆಂಥಿಲ್ ವಾಪಸಾಗಿ ಬ್ಯಾಗ್ ಹಸ್ತಾಂತರಿಸಿದರು. ಅದೃಷ್ಟವಶಾತ್ ಸೆಂಥಿಲ್ ಅವರ ಬ್ಯಾಗ್ ಕೂಡ ಕೈಸೇರಿತು. ಆದರೆ ಲ್ಯಾಪ್‌ಟಾಪ್ ಮಾತ್ರ ಇರಲಿಲ್ಲ. ಕೊನೆಗೆ ಸೀದಾ ರೈಲ್ವೆ ಪೊಲೀಸರ ಬಳಿ ಹೋಗಿ ದೂರು ನೀಡಿ, ಲ್ಯಾಪ್‌ಟಾಪ್ ಸಿಗೊಲ್ಲ ಎಂಬ ಖಾತ್ರಿಯೊಂದಿಗೆ ಸಪ್ಪೆ ಮೋರೆ ಹಾಕಿಕೊಂಡು ಮನೆಗೆ ನಡೆದರು ಸೆಂಥಿಲ್.
ಪ್ರೀತಿ ಹೆಸರಿನಲ್ಲಿ ಹನಿಟ್ರ್ಯಾಪ್…..! ಯುವತಿ ಅಂದಕ್ಕೆ ಮರುಳಾದ ಟೆಕ್ಕಿ ಕಳೆದುಕೊಂಡ ಹಣ ಎಷ್ಟು ಗೊತ್ತಾ…..?
ಸಂಜೆ ವೇಳೆಗೆ ಅವರಿಗೆ ಪೊಲೀಸರಿಂದ ಕರೆಯೊಂದು ಬಂದಿತ್ತು. ಬಾಲು ಎನ್ನುವವರು ಲ್ಯಾಪ್‌ಟಾಪ್ ಹಿಂದಿರುಗಿಸಿದ್ದಾರೆ ಎಂದು ತಿಳಿದಕೂಡಲೇ, ರೈಲ್ವೆ ಪೊಲೀಸರು ತಿಳಿಸಿದ ಠಾಣೆಗೆ ದೌಡಾಯಿಸಿ ಲ್ಯಾಪ್‌ಟಾಪ್ ಪಡೆದುಕೊಂಡರು. ಅದು ಸೆಂಥಿಲ್ ಅವರ ಕಂಪನಿ ನೀಡಿದ ಲ್ಯಾಪ್‌ಟಾಪ್ ಆದ್ದರಿಂದ ಕಂಪನಿಯ ಮಹತ್ವದ ದಾಖಲೆಗಳು ಅದರಲ್ಲಿದ್ದವು. ಬಾಲು ಅವರನ್ನು ತಬ್ಬಿಕೊಂಡು ಸೆಂಥಿಲ್ ಶತಶತ ನಮನಗಳನ್ನು ಸಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.