ಸ್ವೀಟ್ ಬಾಕ್ಸ್ ನಲ್ಲಿ 54 ಲಕ್ಷ ರೂಪಾಯಿ ಮೌಲ್ಯದ ಸೌದಿ ಕರೆನ್ಸಿಯೊಂದಿಗೆ ಬಂದ ಪ್ರಯಾಣಿಕನೊಬ್ಬ ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ.
ಸೆಪ್ಟೆಂಬರ್ 7 ರಂದು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನಿಂದ ಅಂದಾಜು 54 ಲಕ್ಷ ರೂಪಾಯಿ ಮೌಲ್ಯದ ಸೌದಿ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ. ನೋಟುಗಳನ್ನು ಬ್ಯಾಗ್ ಮತ್ತು ಸ್ವೀಟ್ ಬಾಕ್ಸ್ ನಲ್ಲಿ ಇಡಲಾಗಿತ್ತು.
ಕಸ್ಟಮ್ಸ್ ಕಮಿಷನರ್ ಕಚೇರಿಯ ಪ್ರಕಾರ, ಪ್ರಯಾಣಿಕನನ್ನು ಐಜಿಐ ವಿಮಾನ ನಿಲ್ದಾಣದ ಟರ್ಮಿನಲ್ 3 ರಲ್ಲಿ ಬಂಧಿಸಲಾಯಿತು. ಪ್ರಯಾಣಿಕರು ಸ್ವೀಟ್ ಬಾಕ್ಸ್ಗಳಲ್ಲಿ ನೋಟುಗಳನ್ನು ಬಚ್ಚಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸ್ವೀಟ್ ಮತ್ತು ಬ್ಯಾಗ್ ಬಾಕ್ಸ್ಗಳಲ್ಲಿ ವಿದೇಶಿ ಕರೆನ್ಸಿಯನ್ನು ಬಚ್ಚಿಟ್ಟಿರುವ ವಿಡಿಯೋ ವೈರಲ್ ಆಗಿದೆ. ನೋಟುಗಳನ್ನು ಮರೆಮಾಚಲು ಸಿಹಿತಿಂಡಿಗಳನ್ನು ತುಂಬಿದ ಬಾಕ್ಸ್ಗಳನ್ನು ಹೇಗೆ ಬಳಸಲಾಗಿದೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು.
ಇದಕ್ಕೂ ಮುನ್ನ ವ್ಯಕ್ತಿಯೊಬ್ಬ ತನ್ನ ವಿಗ್ನಲ್ಲಿ 30.55 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿತ್ತು. ಈ ವರ್ಷದ ಏಪ್ರಿಲ್ನಲ್ಲಿ ಈ ಘಟನೆ ನಡೆದಿದ್ದು, ಐಜಿಐ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಪ್ರಯಾಣಿಕನನ್ನು ಬಂಧಿಸಲಾಗಿತ್ತು.