ಮುಂಬೈ: ವಿಮಾನದಲ್ಲಿ ಬೀಡಿ ಸೇದಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಂಡಿಗೋ ವಿಮಾನದ ವಿಶ್ರಾಂತಿ ಕೊಠಡಿಯಲ್ಲಿ ಬೀಡಿ ಸೇದಿದ 42 ವರ್ಷದ ಮೊಹಮ್ಮದ್ ಫಕ್ರುದ್ದೀನ್ ಅಮ್ಮುರುದ್ದೀನ್ ಎಂಬ ವ್ಯಕ್ತಿಯನ್ನು ಮುಂಬೈ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಕಾರ್ಮಿಕನಾಗಿರುವ ಅಮ್ಮುರುದ್ದೀನ್ ಇಂಡಿಗೋ ವಿಮಾನದಲ್ಲಿ ದೆಹಲಿಯಿಂದ ಮುಂಬೈ ಮಾರ್ಗವಾಗಿ ರಿಯಾದ್ ಗೆ ಪ್ರಯಾಣಿಸುತ್ತಿದ್ದ ವೇಳೆ ವಿಶ್ರಾಂತಿ ಕೊಠಡಿಯಲ್ಲಿ ಬೀಡಿ ಸೇದಿ ಹೊರಗೆ ಬಂದಿದ್ದ. ಆದರೆ, ಹೊಗೆ ಗಮನಿಸಿದ ಭದ್ರತಾ ಅಧಿಕಾರಿ ಪರಿಶೀಲಿಸಿದಾಗ ಬೀಡಿ ಸೇದಿರುವುದು ಗೊತ್ತಾಗಿ ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.