ಇಸ್ತಾಂಬುಲ್-ದೆಹಲಿ ವಿಮಾನದಲ್ಲಿ ಇಂಡಿಗೋ ಏರ್ ಹೋಸ್ಟೆಸ್ ಪ್ರಯಾಣಿಕನೊಂದಿಗೆ ತೀವ್ರ ವಾಗ್ವಾದಕ್ಕಿಳಿದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಮಾನದಲ್ಲಿ ನೀಡಲಾದ ಊಟಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರು ಮತ್ತು ಗಗನಸಖಿ ನಡುವೆ ವಾಗ್ವಾದ ನಡೆದಿದೆ. ಗುರುಪ್ರೀತ್ ಸಿಂಗ್ ಹನ್ಸ್ ಎಂಬ ಟ್ವಿಟ್ಟರ್ ಬಳಕೆದಾರರು ಕ್ಲಿಪ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು ಆದರೆ ನಂತರ ಅದನ್ನು ತೆಗೆದುಹಾಕಿದ್ದಾರೆ.
ಕ್ಯಾಬಿನ್ ಸಿಬ್ಬಂದಿಯೊಬ್ಬರು ಪ್ರಯಾಣಿಕರಿಗೆ ಆಹಾರವನ್ನು ನೀಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ನಂತರ ಗಗನಸಖಿ, ಪ್ರಯಾಣಿಕರೊಂದಿಗೆ ತರ್ಕಿಸಲು ಪ್ರಯತ್ನಿಸಿದರು ಮತ್ತು ಸಿಬ್ಬಂದಿಯೊಂದಿಗೆ ನಯವಾಗಿ ಮಾತನಾಡುವಂತೆ ವಿನಂತಿಸುವುದನ್ನು ಕಾಣಬಹುದು.
ಆದರೆ ಪ್ರಯಾಣಿಕ ಕೂಗುವುದನ್ನು ಮುಂದುವರೆಸಿ ಗಗನಸಖಿಯ ಮೇಲೆ ಕಿರುಚುತ್ತಾನೆ. ಆಗ ಗಗನಸಖಿ ಕೂಡ ಮೊದಲಿಗೆ ಕೂಗಾಡುತ್ತಾಳೆ. ನಂತರ ನನ್ನನ್ನು ಕ್ಷಮಿಸಿ, ಸರ್, ಆದರೆ ನೀವು ಸಿಬ್ಬಂದಿಯೊಂದಿಗೆ ಹಾಗೆ ಮಾತನಾಡಲು ಸಾಧ್ಯವಿಲ್ಲ. ನಾನು ಶಾಂತಿಯುತವಾಗಿ ಎಲ್ಲಾ ಗೌರವದಿಂದ ನಿಮ್ಮ ಮಾತನ್ನು ಕೇಳುತ್ತಿದ್ದೇನೆ, ಆದರೆ ನೀವು ಸಿಬ್ಬಂದಿಯನ್ನು ಗೌರವಿಸಬೇಕು. ನೀವು ನನ್ನೊಂದಿಗೆ ಹಾಗೆ ಮಾತನಾಡಲು ಸಾಧ್ಯವಿಲ್ಲ. ನಾನಿನ್ನೂ ಇಲ್ಲಿ ಉದ್ಯೋಗಿಯಾಗಿದ್ದೇನೆ,” ಎಂದು ಗಗನಸಖಿ ಉದ್ಗರಿಸಿದಾಗ ಮತ್ತೊಬ್ಬ ಕ್ಯಾಬಿನ್ ಸಿಬ್ಬಂದಿ ಮಧ್ಯಪ್ರವೇಶಿಸಿ ವಿಷಯವನ್ನು ಬಗೆಹರಿಸಲು ಪ್ರಯತ್ನಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.