
ಇತ್ತೀಚಿಗಷ್ಟೇ ತನ್ನ ಟ್ರೈಲರ್ ಮೂಲಕವೇ ಕುತೂಹಲ ಮೂಡಿಸಿದ್ದ ಹಿರಿಯ ನಿರ್ದೇಶಕ ಗಿರೀಶ್ ರಾವ್ ಕಥೆ ಬರೆದಿರುವ ‘ಪಾಶ’ ಕಿರುಚಿತ್ರ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ ಗಮನ ಸೆಳೆದಿದೆ.
ಲಕ್ಷ್ಮಿಕಾಂತ್ ಜೋಶಿ ನಿರ್ದೇಶನದ ಈ ಶಾರ್ಟ್ ಫಿಲಂ ನಲ್ಲಿ ವಿಜಯಕುಮಾರ ಕುಲಕರ್ಣಿ, ಸೋಮಶಂಕರ ಜಿ ಬಿರಾದಾರ್, ಉಮೇಶ್ ಪಾಟೀಲ್, ಶ್ರೀನಿವಾಸ ದೋರನಳ್ಳಿ, ಕೌಶಿಕ್ ಕುಲಕರ್ಣಿ, ಪ್ರದೀಪ, ಲಕ್ಷ್ಮಿ ಅಥಣಿ, ರಿಷಿಕೇಶ್ ಕುಲಕರ್ಣಿ, ಸ್ಪೂರ್ತಿ ಅಥಣಿ, ನೀಲಾಂಬಿಕಾ, ಸ್ನೇಹಾ, ಕಾವ್ಯ, ವೈಷ್ಣವಿ ಸೇರಿದಂತೆ ಹಲವಾರು ಕಲಾವಿದರ ದಂಡೆ ಇದೆ. ಓಂಕಾರ್ ಸಂಕಲನ ಮತ್ತು ರಘು ಛಾಯಾಗ್ರಹಣವಿದೆ.