ಬೆಂಗಳೂರು: ವಾಹನದ ಮೇಲೆ ರಾಜಕೀಯ ಪಕ್ಷದ ಧ್ವಜ ಬಳಕೆ ಅಪರಾಧವಲ್ಲವೆಂದು ಹೈಕೋರ್ಟ್ ಕಲಬುರಗಿ ಪೀಠ ಆದೇಶಿಸಿದೆ.
ವಾಹನಗಳ ಮೇಲೆ ರಾಜಕೀಯ ಪಕ್ಷಗಳ ಚಿಹ್ನೆ, ಧ್ವಜ ಬಳಕೆ ಮಾಡುವ ಕಾರ್ಯಕರ್ತರ ವಿರುದ್ಧ ಭಾರತೀಯ ದಂಡ ಸಂಹಿತೆ ಅನ್ವಯ ಚುನಾವಣಾ ಖರ್ಚು ವೆಚ್ಚದ ನೀಡುವಲ್ಲಿ ವಿಫಲ ಪ್ರಕರಣ ದಾಖಲಿಸದಂತೆ ಹೈಕೋರ್ಟ್ ಆದೇಶಿಸಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಮುದ್ದೇಬಿಹಾಳದ ಕಾಂಗ್ರೆಸ್ ಕಾರ್ಯಕರ್ತ ಹನುಮಗೌಡ ಸೇರಿದಂತೆ ಮೂವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಹನುಮೇಗೌಡ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್ ಕಲಬುರ್ಗಿ ಪೀಠದಲ್ಲಿ ನಡೆದಿದೆ. ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಸಲಾಗಿದ್ದು, ರಾಜಕೀಯ ಪಕ್ಷದ ಧ್ವಜ, ಚಿಹ್ನೆಗಳಿದ್ದ ವಾಹನಗಳಲ್ಲಿ ಬಂದು ಚುನಾವಣೆ ಸಂಬಂಧಿತ ಅಕ್ರಮ ಹಣ ಹಂಚಿಕೆ ಮಾಡಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಇದು ಕಾನೂನಿನ ದುರುಪಯೋಗವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದ್ದು, ವಾಹನಗಳ ಮೇಲೆ ರಾಜಕೀಯ ಪಕ್ಷದ ಚಿಹ್ನೆ, ಧ್ವಜ ಹಾಕಿಕೊಂಡ ಕಾರ್ಯಕರ್ತರ ವಿರುದ್ಧ ಚುನಾವಣಾ ಖರ್ಚು ವೆಚ್ಚ ನೀಡುವಲ್ಲಿ ವಿಫಲ ಕಲಂ ಅಡಿ ಪ್ರಕರಣ ದಾಖಲಿಸುವಂತಿಲ್ಲ ಎಂದು ಆದೇಶಿಸಿದೆ.