ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಮೊದಲು ಪಕ್ಷಾಂತರ ಮಾಡಿದ್ದ ಘಟಾನುಘಟಿ ನಾಯಕರಲ್ಲಿ ಅನೇಕರು ಸೋಲು ಕಂಡಿದ್ದಾರೆ.
ಬಿಜೆಪಿಯಿಂದ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದ ಜಗದೀಶ್ ಶೆಟ್ಟರ್ ಹುಬ್ಬಳ್ಳಿ -ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ.
ಕಾಂಗ್ರೆಸ್ ನಿಂದ ಜೆಡಿಎಸ್ ಸೇರಿದ್ದ ರಘು ಆಚಾರ್ ಚಿತ್ರದುರ್ಗ, ಬಿಜೆಪಿಯಿಂದ ಜೆಡಿಎಸ್ ಸೇರಿದ್ದ ಎ.ಬಿ. ಮಾಲಕರೆಡ್ಡಿ ಯಾದಗಿರಿಯಲ್ಲಿ ಸೋಲು ಕಂಡಿದ್ದಾರೆ.
ಬಿಜೆಪಿಯಿಂದ ಕಾಂಗ್ರೆಸ್ ಸೇರಿದ ಪುಟ್ಟಣ್ಣ, ಬಾಬುರಾವ್ ಚಿಂಚನಸೂರ ಸೋಲು ಕಂಡಿದ್ದಾರೆ. ಬಿಜೆಪಿಯಿಂದ ಜೆಡಿಎಸ್ ಸೇರಿದ್ದ ಆಯನೂರು ಮಂಜುನಾಥ್, ಕಾಂಗ್ರೆಸ್ ನಿಂದ ಜೆಡಿಎಸ್ ಸೇರಿದ್ದ ಅನಿಲ್ ಲಾಡ್, ಬಿಜೆಪಿಯಿಂದ ಜೆಡಿಎಸ್ ಸೇರ್ಪಡೆಯಾಗಿದ್ದ ಎಂ.ಪಿ. ಕುಮಾರಸ್ವಾಮಿ, ಕಾಂಗ್ರೆಸ್ ನಿಂದ ಜೆಡಿಎಸ್ ಸೇರಿದ್ದ ವೈ.ಎಸ್.ವಿ. ದತ್ತ ಹಾಗೂ ಕಾಂಗ್ರೆಸ್ ನಿಂದ ಜೆಡಿಎಸ್ ಸೇರಿದ್ದ ತೇಜಸ್ವಿ ಪಟೇಲ್ ಸೋಲು ಕಂಡಿದ್ದಾರೆ.
ಬಿಜೆಪಿಯಿಂದ ಜೆಡಿಎಸ್ ಸೇರಿದ ಎನ್.ಆರ್. ಸಂತೋಷ್, ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಸೇರ್ಪಡೆಯಾಗಿದ್ದ ಮನೋಹರ್ ತಹಶೀಲ್ದಾರ್ ಹಾಗೂ ಕಾಂಗ್ರೆಸ್ ನಿಂದ ಬಿ.ಎಸ್.ಪಿ. ಸೇರ್ಪಡೆಯಾಗಿದ್ದ ಅಖಂಡ ಶ್ರೀನಿವಾಸ ಮೂರ್ತಿ ಸೋಲು ಕಂಡಿದ್ದಾರೆ.
ಕಾಂಗ್ರೆಸ್ ನಿಂದ ಜೆಡಿಎಸ್ ಸೇರ್ಪಡೆಯಾಗಿದ್ದ ಮೊಯಿದ್ದೀನ್ ಬಾವಾ, ಬಿಜೆಪಿಯಿಂದ ಜೆಡಿಎಸ್ ಸೇರಿದ್ದ ಸೂರ್ಯಕಾಂತ, ಕಾಂಗ್ರೆಸ್ ನಿಂದ ಬಿಜೆಪಿ ಸೇರಿದ್ದ ನಾಗರಾಜ್ ಸೋಲು ಕಂಡಿದ್ದಾರೆ.
ಪಕ್ಷಾಂತರ ಮಾಡಿದವರಲ್ಲಿ ಲಕ್ಷ್ಮಣ ಸವದಿ, ಎ. ಮಂಜು, ರಾಜು ಕಾಗೆ, ಶಿವಲಿಂಗೇಗೌಡ, ಎಸ್.ಆರ್. ಶ್ರೀನಿವಾಸ್, ನೇಮಿರಾಜ ನಾಯ್ಕ್, ಎನ್.ವೈ. ಗೋಪಾಲಕೃಷ್ಣ, ಹೆಚ್.ಡಿ. ತಮ್ಮಯ್ಯ ಜಯಗಳಿಸಿದ್ದಾರೆ.