ಸಂವಿಧಾನದ ದಿನವಾದ ಇಂದು ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಒಂದು ಕುಟುಂಬವು ಹಲವು ತಲೆಮಾರುಗಳಿಂದ ಪಕ್ಷವನ್ನು ಮುನ್ನಡೆಸಿದರೆ ಅದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಪರೋಕ್ಷ ಟಾಂಗ್ ನೀಡಿದ ಪ್ರಧಾನಿ ಮೋದಿ, ಕುಟುಂಬದ ಒಳಿತಿಗಾಗಿ, ಕುಟುಂಬದಿಂದಲೇ ಒಂದು ಪಕ್ಷ ನಡೆಯುತ್ತಿದೆ.ಇದರ ಬಗ್ಗೆ ನಾನು ಹೆಚ್ಚು ಹೇಳಬೇಕೆ..? ಒಂದು ಪಕ್ಷವನ್ನು ಒಂದು ಕುಟುಂಬವೇ ನಡೆಸಿ ಹಾಗೂ ಇಡೀ ಪಕ್ಷದ ವ್ಯವಸ್ಥೆ ಕೂಡ ಅದೇ ಕುಟುಂಬಕ್ಕೆ ಸೀಮಿತವಾಗಿದ್ದರೆ ಅದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ದೊಡ್ಡ ಸಮಸ್ಯೆಯಾಗಲಿದೆ ಎಂದು ಹೇಳಿದ್ರು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ರಾಜವಂಶದ ರಾಜಕೀಯ ಪಕ್ಷಗಳನ್ನು ಒಮ್ಮೆ ಅವಲೋಕಿಸಿ ನೋಡಿ. ಇದು ಪ್ರಜಾಪ್ರಭುತ್ವದ ಉದ್ದೇಶಕ್ಕೆ ವಿರುದ್ಧವಾಗಿದೆ. ಇದು ಸಂವಿಧಾನವನ್ನು ನಂಬುವವರ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿದ್ರು.
ಈ ವಿಚಾರವಾಗಿ ಮತ್ತಷ್ಟು ವಿವರಣೆ ನೀಡಿದ ಪ್ರಧಾನಿ ಮೋದಿ, ಪ್ರಜಾಸತ್ತಾತ್ಮಕ ಗುಣವನ್ನೇ ಕಳೆದುಕೊಂಡಿರುವ ಇಂತಹ ಪಕ್ಷಗಳು ಪ್ರಜಾಪ್ರಭುತ್ವವನ್ನು ಹೇಗೆ ರಕ್ಷಿಸಲು ಸಾಧ್ಯ..? ರಾಜವಂಶದ ರಾಜಕೀಯ ಅಂದರೆ, ಜನರು ಒಂದೇ ಕುಟುಂಬದಿಂದ ರಾಜಕಾರಣಕ್ಕೆ ಬರಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ ಪೀಳಿಗೆಯಿಂದ ಪೀಳಿಗೆಗೆ ಒಂದೇ ಕುಟುಂಬವು ಪಕ್ಷವನ್ನು ಮುನ್ನಡೆಸುತ್ತಿದ್ದರೆ ಅದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಸರಿಯಲ್ಲ ಎಂದು ಹೇಳಿದ್ರು.