ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ಅದೂ ರಜಾದಿನ ಭಾನುವಾರದಂದು ಏನಾದರೂ ಸಣ್ಣ ಕೆಲಸ ಸಿಕ್ಕಿದರೆ ಅದೆಷ್ಟು ಅನುಕೂಲವಾಗುತ್ತೆ ಅಲ್ವಾ? ಆದರೆ ಅಂತಹ ಕೆಲಸ ಹೇಗೆ ಸಿಗಲು ಸಾಧ್ಯ…? ಎಂದು ಅದೆಷ್ಟೋ ವಿದ್ಯಾರ್ಥಿಗಳು ಅಥವಾ ಮನೆಯಲ್ಲಿಯೇ ಇರುವ ಅದೆಷ್ಟೋ ಜನರು ಯೋಚಿಸುತ್ತಿರಬಹುದು. ಅಂತವರಿಗಾಗಿ ಇಲ್ಲಿದೆ ಸುವರ್ಣಾವಕಾಶ.
ಪ್ರತಿ ಭಾನುವಾರದಂದು ಅದು ಬೆಳಿಗ್ಗೆ ನಾಲ್ಕು ಗಂಟೆ ಮಾತ್ರ ಕನ್ನಡ ಓದುವವರಿಗೆ ಪುಸ್ತಕ ತಲುಪಿಸಿದರೆ ಸಾಕು ಹಣ ಸಿಗಲಿದೆ. ಇಂತಹದೊಂದು ಅವಕಾಶವನ್ನು ಪುಸ್ತಕ ಪ್ರಕಾಶನ ಸಂಸ್ಥೆ ʼವೀರಲೋಕʼ ಕಲ್ಪಿಸಿಕೊಡುತ್ತಿದೆ.
ನೀವು ಮಾಡ್ಬೇಕಾದ್ದು ಇಷ್ಟೇ….. ಬೆಂಗಳೂರಿನ ಪಾರ್ಕು, ಹೋಟೆಲ್ ಸೇರಿದಂತೆ ಜನದಟ್ಟಣೆಯ ಪ್ರದೇಶಗಳಲ್ಲಿ ಬೆಳಿಗ್ಗೆ 6:30ರಿಂದ 10:30ವರೆಗೆ ಪುಸ್ತಕದ ಸ್ಟಾಂಡ್ ಇಟ್ಟು ಕನ್ನಡ ಪುಸ್ತಕ ಮಾರಬೇಕು.
ಪ್ರತಿ ಭಾನುವಾರ ಸುಮಾರು ನೂರು ಕಡೆ ಈ ತರ ಕನ್ನಡ ಪುಸ್ತಕ ಓದುವ ಅಭಿಯಾನ ಆರಂಭಿಸುವ ಯೋಚನೆ ʼವೀರಲೋಕʼಕ್ಕಿದೆ. ಮೂರೂವರೆಯಿಂದ ನಾಲ್ಕುಗಂಟೆಯ ಕೆಲಸಕ್ಕಾಗಿ ಪ್ರಯಾಣದ ವೆಚ್ಚಗಳನ್ನು ಕಳೆದು ತಲಾ ರೂ.750/- ಪಾಕೆಟ್ ಮನಿ ಕೂಡ ಸಿಗುತ್ತೆ. ಈ ಕುರಿತು ವೀರಲೋಕ ಪ್ರಕಾಶನದ ವೀರಕಪುತ್ರ ಎಂ ಶ್ರೀನಿವಾಸ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೆಚ್ಚಿನ ವಿವರಗಳಿಗೆ 7022122121 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮಾಡಬಹುದಾಗಿದೆ.