alex Certify BIG NEWS: ನಾಳೆಯಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭ: ವಕ್ಫ್ ತಿದ್ದುಪಡಿ ಸೇರಿ 16 ಮಸೂದೆ ಮಂಡನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಾಳೆಯಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭ: ವಕ್ಫ್ ತಿದ್ದುಪಡಿ ಸೇರಿ 16 ಮಸೂದೆ ಮಂಡನೆ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನಾಳೆ(ಸೋಮವಾರ) ಆರಂಭವಾಗಲಿದ್ದು, ವಕ್ಫ್ ಕಾಯಿದೆಗೆ ತಿದ್ದುಪಡಿ ಸೇರಿದಂತೆ 16 ಮಸೂದೆಗಳು ಸರ್ಕಾರದ ಕಾರ್ಯಸೂಚಿಯಲ್ಲಿವೆ.

ಇವುಗಳಲ್ಲಿ ಐದು ಮಸೂದೆಗಳನ್ನು ಪರಿಚಯ ಮತ್ತು ಅಂಗೀಕಾರಕ್ಕಾಗಿ ನಿಗದಿಪಡಿಸಲಾಗಿದೆ, ಆದರೆ 11 ಪರಿಗಣನೆಗೆ ಮತ್ತು ಅಂಗೀಕಾರಕ್ಕೆ ಇವೆ.

ಐದು ಹೊಸ ಮಸೂದೆಗಳಲ್ಲಿ ಮರ್ಚೆಂಟ್ ಶಿಪ್ಪಿಂಗ್ ಬಿಲ್, ಕೋಸ್ಟಲ್ ಶಿಪ್ಪಿಂಗ್ ಬಿಲ್, ಇಂಡಿಯನ್ ಪೋರ್ಟ್ಸ್ ಬಿಲ್, ಪಂಜಾಬ್ ಕೋರ್ಟ್ಸ್(ತಿದ್ದುಪಡಿ) ಬಿಲ್, ಮತ್ತು ರಾಷ್ಟ್ರೀಯ ಸಹಕಾರಿ ವಿಶ್ವವಿದಾಲಯ ಬಿಲ್ ಸೇರಿವೆ.

ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಪಟ್ಟಿ ಮಾಡಲಾದ ವಕ್ಫ್(ತಿದ್ದುಪಡಿ) ಮಸೂದೆಯನ್ನು ಪ್ರಸ್ತುತ ಜಂಟಿ ಸಂಸದೀಯ ಸಮಿತಿಯು ಪರಿಶೀಲಿಸುತ್ತಿದ್ದು, ಚಳಿಗಾಲದ ಅಧಿವೇಶನದಲ್ಲಿ ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ. ಪ್ರತಿಪಕ್ಷದ ಸದಸ್ಯರು ಸಮಿತಿಯ ಗಡುವನ್ನು ವಿಸ್ತರಿಸುವಂತೆ ಒತ್ತಾಯಿಸಿದ್ದಾರೆ.

ಅಧಿವೇಶನವು ಡಿಸೆಂಬರ್ 20 ರವರೆಗೆ ನಡೆಯಲಿದ್ದು, 19 ಸಭೆಗಳನ್ನು ಒಳಗೊಂಡಿರುತ್ತದೆ.

ನವೆಂಬರ್ 26 ರಂದು ಸಂವಿಧಾನ ದಿನಾಚರಣೆ ಕಾರ್ಯಕ್ರಮ

ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪಾಧ್ಯಕ್ಷ ಜಗದೀಪ್ ಧಂಖರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಂವಿಧಾನ ಸಭೆಯು ಸಂವಿಧಾನವನ್ನು ಅಂಗೀಕರಿಸಿ 75 ವರ್ಷಗಳನ್ನು ಪೂರೈಸುವ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ನವೆಂಬರ್ 26, 1949 ರಂದು ಸಂವಿಧಾನವನ್ನು ಅಂಗೀಕರಿಸಿದ ಹಳೆಯ ಸಂಸತ್ತಿನ ಕಟ್ಟಡವಾದ ಸಂವಿಧಾನ್ ಸದನ್‌ನ ಐತಿಹಾಸಿಕ ಸೆಂಟ್ರಲ್ ಹಾಲ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಘೋಷಿಸಿದ್ದಾರೆ. ಸಂವಿಧಾನವು ಜನವರಿ 26, 1950 ರಂದು ಜಾರಿಗೆ ಬಂದಿತು.

ಈ ಸಂದರ್ಭದಲ್ಲಿ ಸಂಸ್ಕೃತ ಮತ್ತು ಮೈಥಿಲಿಯಲ್ಲಿ ಸಂವಿಧಾನದ ಪ್ರತಿಗಳೊಂದಿಗೆ ಸ್ಮರಣಾರ್ಥ ನಾಣ್ಯ ಮತ್ತು ಅಂಚೆಚೀಟಿ ಬಿಡುಗಡೆ ಮಾಡಲಾಗುವುದು. ಸಂವಿಧಾನದ ವಿವರಣೆಗಳಿಗೆ ಮೀಸಲಾಗಿರುವ ಕಿರುಪುಸ್ತಕದೊಂದಿಗೆ “ಮೇಕಿಂಗ್ ಆಫ್ ದಿ ಕಾನ್ಸ್ಟಿಟ್ಯೂಷನ್: ಎ ಗ್ಲಿಂಪ್ಸ್” ಮತ್ತು “ಮೇಕಿಂಗ್ ಆಫ್ ದಿ ಕಾನ್ಸ್ಟಿಟ್ಯೂಷನ್ ಅಂಡ್ ಇಟ್ಸ್ ಗ್ಲೋರಿಯಸ್ ಜರ್ನಿ” ಎಂಬ ಎರಡು ಪುಸ್ತಕಗಳನ್ನು ಸಹ ಬಿಡುಗಡೆ ಮಾಡಲಾಗುತ್ತದೆ. ಸಂವಿಧಾನದ ಪೀಠಿಕೆಯನ್ನು ಓದಲಾಗುವುದು ಎಂದು ರಿಜಿಜು ಹೇಳಿದ್ದಾರೆ.

ಸರ್ವಪಕ್ಷ ಸಭೆ

ಕೇಂದ್ರವು ಆಯೋಜಿಸಿದ್ದ ಸರ್ವಪಕ್ಷಗಳ ಸಭೆಯಲ್ಲಿ ಮಣಿಪುರ ಹಿಂಸಾಚಾರ ಮತ್ತು ಸಮಸ್ಯೆಯನ್ನು ಕೊನೆಗೊಳಿಸಲು ಪರಿಹಾರಗಳ ಕುರಿತು ಚರ್ಚೆ ನಡೆಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿದವು. ಸಂಸತ್ತಿನ ಸುಗಮ ಕಲಾಪವನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಪಕ್ಷಗಳನ್ನು ಒತ್ತಾಯಿಸಿದೆ.

ಚಳಿಗಾಲದ ಅಧಿವೇಶನಕ್ಕೂ ಮುನ್ನ ಆಡಳಿತ ಪಕ್ಷದ ನಾಯಕರು ವಿವಿಧ ರಾಜಕೀಯ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿದರು. ಸಭೆಯ ನಂತರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಅಧಿವೇಶನ ಸುಗಮವಾಗಿ ನಡೆಯಲು ಎಲ್ಲಾ ಪಕ್ಷಗಳು ಸಹಕರಿಸುವಂತೆ ಮನವಿ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...