ನವದೆಹಲಿ: ಸಂಸತ್ ನಲ್ಲಿ ಭಾರಿ ಭದ್ರತಾ ಲೋಪ ಪ್ರಕರಣ ಖಂಡಿಸಿ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ವಿಪಕ್ಷಗಳ ಮತ್ತಷ್ಟು ಸಂಸದರನ್ನು ಅಮಾನತು ಮಾಡಲಾಗಿದೆ.
ಭದ್ರತಾ ಲೋಪ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಹೇಳಿಕೆ ಕೊಡಬೇಕು ಎಂದು ಲೋಕಸಭೆಯಲ್ಲಿ ವಿಪಕ್ಷ ಸದಸ್ಯರು ಪಟ್ಟು ಹಿಡಿದ್ದಾರೆ. ಈ ವೇಳೆ ಸ್ಪೀಕರ್ ಓಂ ಬಿರ್ಲಾ ವಿಪಕ್ಷ ಸದಸ್ಯರ ಮನವೊಲಿಕೆಗೆ ಯತ್ನಿಸಿದರು. ಆದರೂ ಸಮಾಧಾನಗೊಳ್ಳದ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ನಿಯಮ ಮೀರಿ ವರ್ತನೆ ತೋರಿದ ಆರೋಪದಲ್ಲಿ ವಿಪಕ್ಷಗಳ 49 ಸಂಸದರನ್ನು ಸಂಸತ್ ಚಳಿಗಾಲದ ಅಧಿವೇಶನ ಮುಗಿಯವರೆಗೂ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಸಂಸದರಾದ ಫಾರೂಕ್ ಅಬ್ದುಲ್ಲಾ, ಕಾರ್ತಿ ಚಿದಂಬರಂ, ಡಿಂಪಲ್ ಯಾದವ್, ಮನೀಶ್ ತಿವಾರಿ,ಡ್ಯಾನಿಶ್ ಅಲಿ, ಸುಪ್ರಿಯಾ ಸುಳೆ ಸೇರಿದಂತೆ 49 ಸಂಸದರನ್ನು ಅಮಾನತುಗೊಳಿಸಲಾಗಿದೆ. ಈ ಮೂಲಕ ಈವರೆಗೆ ಸಂಸತ್ ಉಭಯ ಸದನಗಳಿಂದ 141 ಸಂಸದರನ್ನು ಸಸ್ಪೆಂಡ್ ಮಾಡಿದಂತಾಗಿದೆ.