ನವದೆಹಲಿ: ಸಂಸತ್ ಭವನದ ಆವರಣದಲ್ಲಿ ಬಿಜೆಪಿ-ಕಾಂಗ್ರೆಸ್ ಸಂಸದರ ಪ್ರತಿಭಟನೆ ಹೇಳೆ ನೂಕಾಟ ತಳ್ಳಾಟ ನಡೆದು ಹೈಡ್ರಾಮಾ ನಡೆದಿದೆ. ಈ ವೇಳೆ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಕೆಳಗೆ ಬಿದ್ದು ಗಾಯಗೊಂಡಿದ್ದು, ಲೋಕಸಭ ಅವಿಪಕ್ಷ ನಾಯಕ ರಾಹುಲ್ ಗಾಂಧಿ ನನ್ನನ್ನು ತಳ್ಳಿದ್ದರಿಂದ ನಾನು ಬಿದ್ದು ಗಾಯಗೊಂಡಿದ್ದಾಗಿ ಆರೋಪಿಸಿದ್ದಾರೆ.
ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ ನಾನು ಯಾರನ್ನೂ ತಳ್ಳಿಲ್ಲ. ಮಾಧ್ಯಮಗಳ ಕ್ಯಾಮರಾದಲ್ಲಿ ಎಲ್ಲವೂ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ನಾನು ಸಂಸತ್ ಪ್ರವೇಶದ್ವಾರದ ಮೂಲಕ ಸಂಸತ್ ಒಳಗೆ ಹೋಗಲು ಯತ್ನಿಸುತ್ತಿದ್ದೆ. ಈ ವೇಳೆ ಬಿಜೆಪಿ ಸಂಸದರೇ ನನ್ನನ್ನು ತಡೆದರು. ನನ್ನನ್ನೇ ತಳ್ಳಿ, ಬೆದರಿಕೆ ಹಾಕಿದರು. ಸಂಸತ್ ಭವನಕ್ಕೆ ಇದೊಂದೇ ಪ್ರವೇಶದ್ವಾರ. ಒಳಗೆ ಹೋಗುವುದು ನಮ್ಮ ಹಕ್ಕು. ನಮ್ಮನ್ನು ತಳ್ಳುವುದರಿಂದ ಸಮಸ್ಯೆಯಿಲ್ಲ. ಆದರೆ ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರ ಸ್ಮರಣೆಗೆ ಅವಮಾನ ಮಡಿದ್ದಾರೆ. ಇದನ್ನು ನಾವು ಸಹಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.