ಬೆಂಗಳೂರು: ಇನ್ನು ಮುಂದೆ ವಾಹನ ಖರೀದಿಸುವವರು ಸ್ವಂತ ಸ್ಥಳ ಅವಕಾಶ ಹೊಂದಿದ ಬಗ್ಗೆ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ಪಾರ್ಕಿಂಗ್ ನೀತಿ 2.0 ಜಾರಿಗೆ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ನೀತಿಯನ್ನು ಪರಾಮರ್ಶಿಸಿ ಸಚಿವ ಸಂಪುಟದ ಮುಂದೆ ಇಡಲು ಸೂಚಿಸಿದ್ದಾರೆ.
ವಸತಿ ಪ್ರದೇಶಗಳಲ್ಲಿನ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡಲು ಅನುಮತಿ ಪಡೆಯಬೇಕಿದೆ. ವಾಹನ ದಟ್ಟಣೆ ಇರುವ ರಸ್ತೆಗಳಲ್ಲಿ ಪಾರ್ಕಿಂಗ್ ಗೆ ನಿರ್ಬಂಧವಿದೆ. ಇನ್ನು ಮುಂದೆ ಶುಲ್ಕ ಆಧಾರಿತ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ಮೆಟ್ರೋ ನಿಲ್ದಾಣ, ಬಹುಮಹಡಿ ಪಾರ್ಕಿಂಗ್ ಸುತ್ತಲು ಪಾರ್ಕಿಂಗ್ ಪಾರ್ಕಿಂಗ್ ನಿಷೇಧಿಸಲಾಗುತ್ತದೆ.
ವಸತಿ ಪ್ರದೇಶದ ರಸ್ತೆಬದಿಗಳಲ್ಲಿ ವಾಹನ ನಿಲುಗಡೆಗೆ ಪರವಾನಿಗೆ ಕಡ್ಡಾಯವಾಗಲಿದೆ. ಹೊಸ ವಾಹನ ಖರೀದಿಗೆ ಪಾರ್ಕಿಂಗ್ ಸ್ಥಳವಕಾಶದ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು. ಕೈಗಾರಿಕಾ ವಲಯ, ಐಟಿ ಪಾರ್ಕ್ ಗಳಲ್ಲಿ ಬಸ್ ಬೇ ಕಡ್ಡಾಯವಾಗಿದ್ದು, ಮಾರ್ಗಸೂಚಿ ದರ ಆಧರಿಸಿ ಪಾರ್ಕಿಂಗ್ ಶುಲ್ಕ ನಿಗದಿ ಮಾಡಲಾಗುವುದು ಎಂದು ಹೇಳಲಾಗಿದೆ.