ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಲಕ್ಷ್ಯ ಸೇನ್ ಕಂಚಿನ ಪದಕಕ್ಕಾಗಿ ಮಲೇಷ್ಯಾದ ಜಿ ಜಿಯಾ ಲೀ ವಿರುದ್ಧ ಸೋತಿದ್ದಾರೆ.
ಲಕ್ಷ್ಯ ಸೇನ್ ಬಲ ಮೊಣಕೈ ಏಟಿನ ನಡುವೆಯೂ ಉತ್ಸಾಹಭರಿತರಾಗಿ ಹೋರಾಟ ನಡೆಸಿದರು. ಆದರೆ ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯ ಕಂಚಿನ ಪದಕದ ಪಂದ್ಯದಲ್ಲಿ ಮಲೇಷ್ಯಾದ ಏಳನೇ ಶ್ರೇಯಾಂಕದ ಲೀ ಝಿ ಜಿಯಾ ವಿರುದ್ಧ ಸೋತರು.
ಸೋಮವಾರ ನಡೆದ ರೋಚಕ ಪಂದ್ಯದಲ್ಲಿ ಭಾರತದ ಲಕ್ಷ್ಯ ಸೇನ್ ಅವರು “ಅಸಾಧಾರಣ” ಪ್ರದರ್ಶನ ನೀಡಿದರು. ಆದರೆ ಮಲೇಷ್ಯಾದ ಷಟ್ಲರ್ ಲೀ ಝಿ ಜಿಯಾ ವಿರುದ್ಧ ಸೋತರು. ಸೇನ್ ಮತ್ತು ಜಿಯಾ ಮುಖಾಮುಖಿ ಪಂದ್ಯದಲ್ಲಿ ಹೋರಾಡಿದರು. ಸೇನ್ ಮೊದಲ ಸೆಟ್ ಗೆದ್ದುಕೊಂಡರು, ಆದಾಗ್ಯೂ, ಅವರು ಎರಡನೇ ಸೆಟ್ ಅನ್ನು 21-16 ಪಾಯಿಂಟ್‌ಗಳಿಂದ ಕಳೆದುಕೊಂಡರು. ಆದರೆ, ಮೂರನೇ ಸೆಟ್‌ನಲ್ಲಿ 10 ಪಾಯಿಂಟ್‌ಗಳನ್ನು ಗಳಿಸಿದರು.
ವಿಶ್ವ ನಂ. 22 ಶಟ್ಲರ್ ಲಕ್ಷ್ಯ ಸೇನ್ ಅವರ ಚಿನ್ನ ಗೆಲ್ಲುವ ಕನಸು ಆಗಸ್ಟ್ 4 ರಂದು ಭಗ್ನಗೊಂಡಿತು, ಅವರು ವಿಶ್ವದ ನಂ. 2 ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಸೋತರು,