
ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ನಾಯಕ ರಾಘವ್ ಚಡ್ಡಾ ಅವರು ದೀರ್ಘಕಾಲ ಡೇಟಿಂಗ್ ಬಗ್ಗೆ ವದಂತಿಗಳ ನಂತರ ನಿಶ್ಚಿತಾರ್ಥ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಇಂದು ಹೊಸದಿಲ್ಲಿಯ ಕಪುರ್ತಲಾ ಹೌಸ್‌ನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ.
ನಿಶ್ಚಿತಾರ್ಥ ಸಮಾರಂಭವು ಸಂಜೆ 5 ಗಂಟೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಸಿಖ್ ಸಂಪ್ರದಾಯಗಳ ಪ್ರಕಾರ ಸಮಾರಂಭ ನಡೆಯಲಿದೆ. ಸಂಜೆ 6 ಗಂಟೆಗೆ ಆರ್ದಾಸ್ ನಂತರ ಸುಖಮಣಿ ಸಾಹಿಬ್ ಪಥದೊಂದಿಗೆ ಸಮಾರಂಭವು ಪ್ರಾರಂಭವಾಗುತ್ತದೆ.
ಮೂಲಗಳ ಪ್ರಕಾರ ನಿಶ್ಚಿತಾರ್ಥ ಸಮಾರಂಭಕ್ಕೆ ಎರಡೂ ಕುಟುಂಬ ಮತ್ತು ಆಪ್ತ ಸ್ನೇಹಿತರ 150 ಜನರನ್ನು ಆಹ್ವಾನಿಸಲಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ನಟಿ ಪ್ರಿಯಾಂಕಾ ಚೋಪ್ರಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ರಾಘವ್ ಅವರು ಪವನ್ ಸಚ್‌ದೇವ್ ವಿನ್ಯಾಸಗೊಳಿಸಿದ ದಿರಿಸು ಹಾಕಿಕೊಂಡ್ರೆ ಪರಿಣಿತಿ ಚೋಪ್ರಾ ಮನೀಷ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಉಡುಪನ್ನು ಧರಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್‌ನಲ್ಲಿ ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ಪರಿಣಿತಿ ಮತ್ತು ರಾಘವ್ ಅವರ ಡೇಟಿಂಗ್ ವದಂತಿಗಳು ಪ್ರಾರಂಭವಾದವು. ಪರಿಣಿತಿ ಮತ್ತು ರಾಘವ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಒಟ್ಟಿಗೆ ಓದುತ್ತಿದ್ದರು ಮತ್ತು ದೀರ್ಘಕಾಲ ಸ್ನೇಹಿತರಾಗಿದ್ದಾರೆ.