ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ದಂಪತಿಗಳು ಒಂದೇ ಮಗುವನ್ನು ಹೊಂದಲು ಬಯಸುತ್ತಾರೆ. ಹಾಗೇ ಒಬ್ಬನೇ ಮಗು ಎಂಬ ಕಾರಣಕ್ಕೆ ಅತಿಯಾಗಿ ಮುದ್ದು ಮಾಡುತ್ತಾರೆ. ಅಂತಹ ಪೋಷಕರು ಒಮ್ಮೆ ಈ ವಿಚಾರ ತಿಳಿದಿರಿ. ಇಲ್ಲವಾದರೆ ಈ ವಿಚಾರ ಮುಂದೆ ನಿಮಗೆ ಸಮಸ್ಯೆಯಾಗಿ ಕಾಡಬಹುದು.
ನಿಮಗೆ ಒಂದು ಮಗುವಿದ್ದರೆ ಪೋಷಕರು ಕೆಲಸಕ್ಕೆ ಹೋದಾಗ ಅವರಲ್ಲಿ ಒಂಟಿತನ ಕಾಡಬಹುದು. ಇದರಿಂದ ಅವರು ಮಾನಸಿಕವಾಗಿ ಕುಗ್ಗಬಹುದು. ಹಾಗಾಗಿ ಅವರನ್ನು ನೋಡಿಕೊಳ್ಳಲು ಸ್ನೇಹಿತರು, ಕುಟುಂಬದವರ ಸಹಾಯ ತೆಗೆದುಕೊಳ್ಳಿ.
ಹಾಗೇ ಪೋಷಕರು ಮಗುವಿನೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳಿ. ಇದರಿಂದ ಮಗು ಒಂಟಿತನವನ್ನು ಅನುಭವಿಸುವುದಿಲ್ಲ. ಹಾಗೇ ತನಗೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ.
ಹಾಗೇ ಮಗುವಿನ ಪ್ರತಿ ಬೇಡಿಕೆಯನ್ನು ಈಡೇರಿಸಬೇಡಿ. ಇದರಿಂದ ಮಕ್ಕಳು ಹಠಮಾರಿಗಳಾಗುತ್ತಾರೆ. ಅವರು ಕೇಳಿದ್ದನ್ನು ನೀವು ಕೊಡದಿದ್ದರೆ ಕೋಪಗೊಳ್ಳಬಹುದು. ಹಾಗಾಗಿ ಅವರಿಗೆ ವಸ್ತುಗಳ ಮೌಲ್ಯವನ್ನು ತಿಳಿಸಲು ಪ್ರಯತ್ನಿಸಿ. ಇದು ಅವರ ಮುಂದಿನ ಜೀವನಕ್ಕೂ ಒಳ್ಳೆಯದು.
ಹಾಗೇ ಈ ಮಗುವನ್ನು ಸ್ವತಂತ್ರರಾಗಿ ಬೆಳೆಯಲು ಬಿಡಿ ಮತ್ತು ಅವರ ಮೇಲೆ ನಿರೀಕ್ಷೆಗಳ ಭಾರವನ್ನು ಹಾಕಬೇಡಿ. ಅವರ ಮೇಲೆ ಒತ್ತಡವನ್ನು ಹೇರಬೇಡಿ. ಇದು ಮಗುವಿನ ಮಾನಸಿಕ ಆರೋಗ್ಯವನ್ನು ಹಾಳುಮಾಡುತ್ತದೆ.