ಮಕ್ಕಳು ಏನಾದರು ತಪ್ಪು ಮಾಡಿದಾಗ ತಂದೆ-ತಾಯಿಗಳು ಶಿಕ್ಷೆ ಕೊಡುವುದು ಸಾಮಾನ್ಯ. ಆದರೆ ಕೆಲವೊಮ್ಮೆ ತಂದೆ-ತಾಯಂದಿರು ಅತೀರೇಕವಾಗಿ ಶಿಸ್ತನ್ನು ಮಕ್ಕಳ ಮೇಲೆ ಹೇರುತ್ತಾರೆ. ಚಿಕ್ಕ ತಪ್ಪನ್ನು ಗುಡ್ಡ ಮಾಡಿ ಮಕ್ಕಳ ಮನಸ್ಸನ್ನು ಘಾಸಿಗೊಳಿಸುತ್ತಾರೆ. ಇದರಿಂದ ಮಕ್ಕಳು ಸುಳ್ಳು ಹೇಳುವುದನ್ನು ಕಲಿಯುತ್ತಾರೆ.
ನಮ್ಮ ಮಕ್ಕಳು ತಪ್ಪು ಮಾಡಿದ್ದು ಗೊತ್ತಾದಾಗ ಮೊದಲು ಅವರ ಹತ್ತಿರ ಕುಳಿತು ನಿಧಾನಕ್ಕೆ ಮಾತನಾಡಿ. ಯಾಕೆ ಹಾಗೇ ಮಾಡಿದ್ದು, ಏನಾಗಿತ್ತು ಎಂದು ವಿಚಾರಿಸಿ. ಮೊದಲೇ ಎರಡೇಟು ಹೊಡೆದರೆ ಮಕ್ಕಳ ಮನಸ್ಸಿನಲ್ಲಿರುವ ಮಾತು ಅಲ್ಲಿಯೇ ಉಳಿದು ಹೋಗುತ್ತದೆ. ನಾವು ಏನು ಹೇಳಿದರೂ ಇವರು ಕೇಳಲ್ಲ ಎಂದು ಅವರು ತಮ್ಮದಲ್ಲದ ತಪ್ಪಿಗೂ ಶಿಕ್ಷೆ ಅನುಭವಿಸಿ ಬಿಡುತ್ತಾರೆ.
ಇನ್ನು ಕೆಲವು ಮಕ್ಕಳು ಹೊಡೆತದ ಹೆದರಿಕೆಗೆ ಸುಳ್ಳು ಹೇಳುವುದನ್ನು ಕಲಿಯುತ್ತಾರೆ. ಮುಂದೆ ಇದೇ ವ್ಯಕ್ತಿತ್ವವನ್ನು ಅವರು ಪಾಲಿಸಿಕೊಂಡು ಹೋಗುತ್ತಾರೆ.
ಮಕ್ಕಳು ಏನೇ ತಪ್ಪು ಮಾಡಿದರೂ ಮೊದಲು ತಂದೆ-ತಾಯಿಯಾದವರು ಅವರ ಬಳಿ ಮಾತನಾಡಿ ನಂತರ ಬುದ್ದಿ ಹೇಳಿ. ಇದರಿಂದ ಅವರು ಇನ್ನೊಮ್ಮೆ ತಪ್ಪು ಮಾಡುವಾಗ ಯೋಚಿಸುತ್ತಾರೆ. ಹಾಗೇ ಏನೇ ಮಾಡಿದರೂ ನಿಮ್ಮ ಮುಂದೆ ಬಂದು ಹೇಳುವಷ್ಟು ಸೌಜನ್ಯ ಬೆಳೆಸಿಕೊಳ್ಳುತ್ತಾರೆ.