ಮನೆ ಮಕ್ಕಳಿಗೆ ಮೊದಲ ಪಾಠ ಶಾಲೆ. ಮಕ್ಕಳು ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಮಕ್ಕಳು, ಮನೆಯ ಜನರಿಂದ ಸಾಕಷ್ಟು ವಿಷ್ಯವನ್ನು ಕಲಿಯುತ್ತಾರೆ. ಮಕ್ಕಳಿಗೆ ಒಳ್ಳೆ ವಿಷ್ಯಗಳನ್ನು ಕಲಿಸಲು, ಪಾಲಕರು ಸಾಕಷ್ಟು ಕಷ್ಟಪಡ್ತಾರೆ. ಆದ್ರೆ ಪಾಲಕರ ಯಡವಟ್ಟಿನಿಂದಾಗಿ ಮಕ್ಕಳು ಅನೇಕ ಬಾರಿ ಕೆಟ್ಟ ವಿಷ್ಯಗಳನ್ನು ಕಲಿಯುತ್ತಾರೆ. ಮಕ್ಕಳ ಮುಂದೆ ಕೆಲವೊಂದು ತಪ್ಪುಗಳನ್ನು ಪಾಲಕರು ಅಪ್ಪಿತಪ್ಪಿಯೂ ಮಾಡಬಾರದು.
ಜಗಳ : ಮಕ್ಕಳ ಮುಂದೆ ಜಗಳವಾಡಿದ್ರೆ ಅದು ಮಕ್ಕಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ದಂಪತಿ ಮಧ್ಯೆ ಎಷ್ಟು ಭಿನ್ನಾಭಿಪ್ರಾಯವಿದ್ದರೂ ಅದನ್ನು ಮಕ್ಕಳ ಮುಂದೆ ತೋರಿಸಬೇಡಿ. ಮಕ್ಕಳ ಮುಂದೆ ಶಾಂತವಾಗಿ ಮಾತನಾಡಿ. ಯಾವುದೇ ಸಮಸ್ಯೆ, ವಿವಾದವನ್ನು ಪ್ರೀತಿಯಿಂದಲೂ ಬಗೆಹರಿಸಿಕೊಳ್ಳಬಹುದು ಎಂಬುದನ್ನು ಮಕ್ಕಳಿಗೆ ಕಲಿಸಿ.
ಬಡಿದಾಟ : ಮಕ್ಕಳ ಮುಂದೆ ನಡೆಯುವ ಯಾವುದೇ ಹಿಂಸೆ, ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಬೇರೆಯವರ ಜೊತೆ ವ್ಯವಹರಿಸುವುದನ್ನು ಮಕ್ಕಳು, ಪಾಲಕರಿಂದ ಕಲಿಯುತ್ತಾರೆ. ಮನೆಯಲ್ಲಿ ಸದಾ ಗಲಾಟೆ, ಜಗಳ, ಬಡಿದಾಟವಾಗ್ತಿದ್ದರೆ ಮುಂದೆ ಮಕ್ಕಳು ವ್ಯಸನಿಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಕಠಿಣ ನಿಮಯ : ಮಕ್ಕಳಿಗೆ ಯಾವುದೇ ವಿಷ್ಯದಲ್ಲಿ ಒತ್ತಡ ಹೇರಬಾರದು. ಬೆದರಿಕೆ, ಒತ್ತಾಯದ ಮೂಲಕ ಅವರನ್ನು ಬದಲಿಸುವ ಪ್ರಯತ್ನ ಮಾಡಬಾರದು. ಕಠಿಣ ನಿಯಮಗಳು ಮಕ್ಕಳನ್ನು ಬದಲಿಸುತ್ತವೆ. ಪಾಲಕರಿಂದ ದೂರವಾಗುವ ಮಕ್ಕಳು, ನಕಾರಾತ್ಮಕ ಆಲೋಚನೆ ಶುರು ಮಾಡುತ್ತವೆ.
ಸಮಾಜದಿಂದ ದೂರ : ಅನೇಕ ಪಾಲಕರು ಮನೆಯಿಂದ ಹೊರ ಬೀಳುವುದಿಲ್ಲ. ಬೇರೆಯವರ ಜೊತೆ ಬೆರೆಯುವುದಿಲ್ಲ. ಸದಾ ಮನೆಯಲ್ಲಿರುವ ಪಾಲಕರ ಸ್ವಭಾವವನ್ನೇ ಮಕ್ಕಳು ಕಲಿಯುತ್ತವೆ. ಮಕ್ಕಳು ಕೂಡ ಬೇರೆಯವರ ಜೊತೆ ಬೆರೆಯದೆ, ಬೇರೆಯವರಿಗೆ ನೆರವಾಗದೆ ಒಂಟಿಯಾಗಿ ಜೀವನ ನಡೆಸಲು ಕಲಿಯುತ್ತಾರೆ.
ಒತ್ತಡ : ಪಾಲಕರು, ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಅತಿ ಬೇಗ ಒತ್ತಡಕ್ಕೊಳಗಾಗುವ ಪಾಲಕರಿದ್ದರೆ, ಮಕ್ಕಳು ಕೂಡ ಇದೇ ರೀತಿ ವರ್ತಿಸಲು ಶುರು ಮಾಡ್ತಾರೆ. ಯಾವುದೇ ಒತ್ತಡವನ್ನು ಅವರಿಂದಲೂ ಹಿಡಿದಿಡಲು ಸಾಧ್ಯವಾಗುವುದಿಲ್ಲ. ಕೋಪದಲ್ಲಿ ಕೂಗಾಡುವುದು, ಎದುರುತ್ತರ ನೀಡುವುದು,ವಸ್ತುಗಳನ್ನು ಒಡೆದು ಹಾಕುವುದು ಸೇರಿದಂತೆ ಕೆಟ್ಟ ಅಭ್ಯಾಸವನ್ನು ಮಕ್ಕಳಿಂದ ಕಲಿಯುತ್ತಾರೆ.