ಮಕ್ಕಳಿಗೆ ಜನ್ಮವಿತ್ತು ಅವರನ್ನು ನೋಡಿಕೊಳ್ಳುವುದು ಬಲು ಕಷ್ಟದ ಕೆಲಸ. ಅದರಲ್ಲೂ ಕಷ್ಟದ ಅನುಭವವೇ ಇಲ್ಲದೇ ಬೆಳೆದು ಮದುವೆ ಮಾಡಿಕೊಂಡು ಮಕ್ಕಳನ್ನು ಹೆರುವ ಮಂದಿಗಂತೂ ಈ ವಿಚಾರ ಕಷ್ಟಾತಿಕಷ್ಟವೇ ಸರಿ.
ಅದರಲ್ಲೂ ಸಿರಿವಂತ ದೇಶಗಳಲ್ಲಿ ಮಕ್ಕಳನ್ನು ಸಾಕುವ ಸಂಬಂಧ ಭಾರೀ ಕಟ್ಟುನಿಟ್ಟಿನ ನಿಯಮಗಳಿದ್ದು, ಉಲ್ಲಂಘನೆ ಮಾಡಿದಲ್ಲಿ ಹೆತ್ತವರಿಗೆ ಕಠಿಣವಾದ ಶಿಕ್ಷೆಗಳನ್ನು ಕೊಡಲಾಗುತ್ತದೆ.
SHOCKING: ಆಟವಾಡುವಾಗಲೇ ಕಾದಿತ್ತು ದುರ್ವಿಧಿ, ಮೂವರು ಮಕ್ಕಳ ಜೀವತೆಗೆದ ಜೋಕಾಲಿ
ಈ ವಿಚಾರದಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಆಸ್ಟ್ರೇಲಿಯಾದ ಮಕ್ಕಳ ಪೋರ್ಟಲ್ ಒಂದು, ಮಕ್ಕಳ ನ್ಯಾಪ್ಪಿಗಳನ್ನು ಬಿಚ್ಚುವ ಮುನ್ನ ಅವುಗಳ ಅನುಮತಿ ಪಡೆಯಬೇಕೆಂದು ಹೇಳಿದ್ದು ಭಾರೀ ಚರ್ಚೆ ಸೃಷ್ಟಿಸಿದೆ. ಈ ಪೋರ್ಟಲ್‌ನ ಹೆಸರು ’ಓನ್ಲಿ ಅಬೌಟ್ ಚಿಲ್ಡ್ರನ್ಸ್’ ಎಂಬುದಾಗಿದೆ.
ರಾಷ್ಟ್ರಮಟ್ಟದಲ್ಲಿರುವ ಚೈಲ್ಡ್ ಕೇರ್ ಚೇನ್ ಒಂದು ಈ ರೀತಿ ಹೇಳಿದ್ದು, ಮಕ್ಕಳಿಗೆ ಹುಟ್ಟಿನಿಂದಲೇ ಮರ್ಯಾದೆ ಕೊಡಬೇಕಿದ್ದು, ಇದರ ಭಾಗವಾಗಿ ಅವರ ನ್ಯಾಪ್ಪಿಗಳನ್ನು ಬದಲಿಸುವ ಮುನ್ನ ಅವರನ್ನೊಮ್ಮೆ ಅನುಮತಿ ಕೇಳಬೇಕೆಂದು ತಿಳಿಸಿದೆ.